ಶಿವಮೊಗ್ಗ: ರೈಲಿಗೆ ಸಿಲುಕಿ ಕೂಲಿ ಕಾರ್ಮಿಕನೊಬ್ಬನ ಕಾಲು ತುಂಡಾಗಿರುವ ಘಟನೆ ಶಿವಮೊಗ್ಗದ ಸರ್‌ಎಂ.ವಿ.ರಸ್ತೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ ಬೆಂಗಳೂರಿಗೆ ಹೊರಟಿದ್ದ ರೈಲಿಗೆ ಸಿಲುಕಿ ಕೂಲಿ ಕಾರ್ಮಿಕ ಆದಿಲ್ ಎಂಬಾತ ತನ್ನ ಬಲಗಾಲನ್ನು ಕಳೆದುಕೊಂಡಿದ್ದಾನೆ.
ಆದಿಲ್ (19) ಬಿಹಾರ ಮೂಲದ ಕಾರ್ಮಿಕನಾಗಿದ್ದು, ರೈಲ್ವೆ ಮೇತ್ಸುವೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ಮದ್ಯಪಾನ ಮಾಡಿ ಹಳಿ ದಾಟುವಾಗ ರೈಲು ಬರುವುದನ್ನು ಗಮನಿಸದೆ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ. ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.