ಶಿವಮೊಗ್ಗ :ಜಮೀನು ವಿವಾದ ಸಂಬಂಧ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹೊಳೆಹೊನ್ನೂರು ಸಮೀಪದ ತಿಮ್ಮಾಪುರ ಗ್ರಾಮದ ನಿವಾಸಿ ಶಿವಲಿಂಗಪ್ಪ(45) ಕೊಲೆಯಾದ ದುರ್ದೈವಿ. ತಿಮ್ಮಾಪುರ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧ ಪಟ್ಟಂತೆ ಶಿವಲಿಂಗಪ್ಪ ಅವರ ಮಾವ ಹಾಗೂ ಹೊನ್ನಪ್ಪ ಅವರಿಗೆ 1 ಎಕರೆ ಜಮೀನು ಸಂಬಂಧ ವಿವಾದವಿತ್ತು.
ಈ ವಿವಾದ ಪ್ರಕರಣ ಕೋರ್ಟ್ನಲ್ಲಿದ್ದು, ಭೂಮಿಯನ್ನ ಕೊಲೆಯಾದ ಶಿವಲಿಂಗಪ್ಪರ ಮಾವ ಹೊನ್ನಪ್ಪ ಉಳುಮೆ ಮಾಡುತ್ತಿದ್ದರು. ಆದರೆ, ಶಿವಲಿಂಗಪ್ಪ ಕೋರ್ಟ್ನಿಂದ ಇದಕ್ಕೆ ತಡೆಯಾಜ್ಞೆ ತಂದಿದ್ದರು.