ಶಿವಮೊಗ್ಗ:ಸಾಗರದ ಗಾಂಧಿ ಮೈದಾನದಲ್ಲಿ ನಿನ್ನೆ ನಡೆದ ಶ್ವಾನ ಪ್ರದರ್ಶನದಲ್ಲಿ ವೀಕ್ಷಣೆಗೆ ಬಂದಿದ್ದ ವ್ಯಕ್ತಿಗೆ ನಾಯಿ ಕಚ್ಚಿ ಗಾಯಗೊಳಿಸಿದೆ. ನಿನ್ನೆ ಸಾಗರದಲ್ಲಿ ಶರತ್ ಎಂಬುವರು ತಮ್ಮ ಕುಟುಂಬದೊಂದಿಗೆ ಶ್ವಾನ ಪ್ರದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಶರತ್ ಅವರ ಮೈಮೇಲೆ ಎಗರಿದ ರಾಟ್ ವ್ಹೀಲರ್ ಜಾತಿಯ ಶ್ವಾನ ತೊಡೆ ಹಾಗೂ ಕಾಲಿನ ಭಾಗಕ್ಕೆ ಕಚ್ಚಿ ಗಾಯಗೊಳಿಸಿದೆ.
ಸಾಗರದ ಸಹ್ಯಾದ್ರಿ ಕೆನಲ್ ಕ್ಲಬ್ ವತಿಯಿಂದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ವಿವಿಧ ಜಾತಿಯ ಶ್ವಾನಗಳು ಆಗಮಿಸಿದ್ದವು. ಶ್ವಾನಗಳ ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಶ್ವಾನ ಪ್ರದರ್ಶನ ವೀಕ್ಷಿಸಲು ಬಂದಿದ್ದ ಶರತ್ ಎಂಬುವವರು ತಮ್ಮ ಕುಟುಂಬದ ಜೊತೆ ಆಗಮಿಸಿದ್ದರು. ಈ ವೇಳೆ ಶರತ್ ಅವರ ಮೇಲೆ ರಾಟ್ ವ್ಹೀಲರ್ ಜಾತಿಯ ಶ್ವಾನ ದಾಳಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶರತ್ ಅವರು, ನಾನು ನನ್ನ ಕುಟುಂಬದ ಜೊತೆ ಶ್ವಾನ ಪ್ರದರ್ಶನಕ್ಕೆ ಬಂದಿದ್ದೆ, ಈ ವೇಳೆ ರಾಟ್ ವ್ಹೀಲರ್ ನನ್ನ ಮೇಲೆ ದಾಳಿ ನಡೆಸಿತು. ನನ್ನ ಕೈ ಹಾಗೂ ಕಾಲಿಗೆ ನಾಯಿ ಕಚ್ಚಿದೆ. ಇಷ್ಟಾದರೂ ಸಹ ರಾಟ್ ವ್ಹೀಲರ್ ನಾಯಿಯ ಮಾಲೀಕ ನಾಯಿಯನ್ನು ಹಿಂದಕ್ಕೆ ಕರೆಯದೆ, ನನ್ನ ಮೇಲೆ ದಾಳಿ ಮಾಡುತ್ತಿದ್ದರು ಸಹ ಸುಮ್ಮನಿದ್ದರು. ಅಲ್ಲದೆ ಆಯೋಜಕರು ಸಹ ಸುಮ್ಮನಿದ್ದರು. ನಾನು ಗಾಯಗೊಂಡು ಆಸ್ಪತ್ರೆಗೆ ಬಂದರು ಸಹ ಯಾರು ಸಹ ನಾನು ಹೇಗಿದ್ದೇನೆ ಎಂದು ಕೇಳಲು ಬಂದಿಲ್ಲ ಎಂದು ಆರೋಪಿಸಿದ್ದಾರೆ.