ಶಿವಮೊಗ್ಗ: ಸಿಎಂ ಯಡಿಯೂರಪ್ಪ ಅವರ ಸ್ವಕ್ಷೇತ್ರದಲ್ಲೇ ವ್ಯಕ್ತಿಯೊಬ್ಬ ಪೊಲೀಸರ ಲಾಠಿ ಏಟಿನಿಂದ ಸಾವನ್ನಪ್ಪಿದ್ದಾನೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಪೊಲೀಸ್ ಲಾಠಿ ಏಟಿನಿಂದಲೇ ವ್ಯಕ್ತಿ ಸಾವು: ಸಿಎಂ ಬಿಎಸ್ವೈ ಕ್ಷೇತ್ರದಲ್ಲಿ ಜನರ ಆರೋಪ - ಪೊಲೀಸ್ ಲಾಠಿ ಏಟಿಗೆ ವ್ಯಕ್ತಿ ಸಾವು
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ಸುಣ್ಣದಕೊಪ್ಪ ಗ್ರಾಮದಲ್ಲಿ ಪೊಲೀಸರ ಲಾಠಿ ಏಟಿನಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಸಮೀಪದ ಸುಣ್ಣದಕೊಪ್ಪ ಗ್ರಾಮದಲ್ಲಿ ಪೊಲೀಸ್ ಲಾಠಿ ಏಟಿನಿಂದ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಣ್ಣದಕೊಪ್ಪ ಗ್ರಾಮದ ಲಕ್ಷ್ಮಣ ನಾಯ್ಕ್ (50) ಮೃತ ವ್ಯಕ್ತಿ. ಲಾಕ್ಡೌನ್ ಆದೇಶದ ನಡುವೆ ಈತ ತನ್ನ ಜಮೀನಿಗೆ ನೀರು ಬಿಟ್ಟು ಬರಲು ಹೋಗಿದ್ದ ವೇಳೆ, ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದಕ್ಕೆ ಲಕ್ಷ್ಮಣ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆದ್ರೆ ಪೊಲೀಸರು ಈ ಆರೋಪವನ್ನು ತಳ್ಳಿಹಾಕಿದ್ದಾರೆ.
ಲಕ್ಷ್ಮಣ ನಾಯ್ಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.