ಕರ್ನಾಟಕ

karnataka

ETV Bharat / state

ಶಿಕಾರಿಪುರ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕ ಸಾವು

ಶಿಕಾರಿಪುರದ ಹೋರಿ ಬೆದರಿಸುವ ಸ್ಪರ್ಧೆಗೆ ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಸೇರಿದಂತೆ ಐದಾರು ಜಿಲ್ಲೆಯ ಹೋರಿಗಳು ಆಗಮಿಸಿದ್ದವು. ಆದರೆ, ಈ ಸ್ಪರ್ಧೆಗೆ ಜಿಲ್ಲಾಡಳಿತ, ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ.

man-died-by-cattle-stab-in-shivamogga
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕ ಮೃತ

By

Published : Nov 7, 2021, 9:08 PM IST

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಹೋರಿಯೊಂದು ತಿವಿದು ಯುವಕ ಮೃತಪಟ್ಟಿರುವ ಘಟನೆ ಶಿಕಾರಿಪುರದ ದೊಡ್ಡಕೇರಿಯಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ನಿವಾಸಿ ರಾಕೇಶ್ (25) ಎಂದು ಗುರುತಿಸಲಾಗಿದೆ. ಸ್ಪರ್ಧೆ ವೀಕ್ಷಿಸಲು ಬಂದಿದ್ದ ಯುವಕನಿಗೆ ಹಿಂಬದಿಯಿಂದ ಬಂದ ಹೋರಿಯೊಂದು ಅವರ ಎಡ ಪಕ್ಕೆಲುಬಿಗೆ ತಿವಿದಿದೆ. ಪರಿಣಾಮ, ಅವರು ತೀವ್ರವಾಗಿ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಾದೃಷ್ಟವಶಾತ್​ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


ಸ್ಪರ್ಧೆಗೆ ಅನುಮತಿ ಇರಲಿಲ್ಲ:

ಶಿಕಾರಿಪುರದ ಹೋರಿ ಬೆದರಿಸುವ ಸ್ಪರ್ಧೆಗೆ ಶಿವಮೊಗ್ಗ, ಹಾವೇರಿ, ಉತ್ತರ ಕನ್ನಡ ಸೇರಿದಂತೆ ಐದಾರು ಜಿಲ್ಲೆಯ ಹೋರಿಗಳು ಆಗಮಿಸಿದ್ದವು. ಆದರೆ, ಈ ಸ್ಪರ್ಧೆಗೆ ಜಿಲ್ಲಾಡಳಿತ, ಸ್ಥಳೀಯ ಆಡಳಿತ ಹಾಗೂ ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಆದರೂ, ಸ್ಥಳೀಯ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅವಕಾಶ ಕಲ್ಪಿಸಲಾಗಿತ್ತು ಎನ್ನಲಾಗಿದೆ.

ಈ ಘಟನೆ ಶಿಕಾರಿಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳ ಹಿಂದೆ ಸೊರಬ ತಾಲೂಕಿನಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಮೂರು ಸಾವು ಸಂಭವಿಸಿತ್ತು. ಇದರಿಂದಾಗಿ ಜಿಲ್ಲಾಡಳಿತ ಸ್ಪರ್ಧೆಗೆ ನಿಷೇಧ ಹೇರಿತ್ತು.

ಇದನ್ನೂ ಓದಿ:ಉಪ್ಪಿನಂಗಡಿಯಲ್ಲಿ ಪತ್ತೆಯಾದ ಗ್ರೆನೇಡ್ ಸೇನಾ ಫ್ಯಾಕ್ಟರಿಯಲ್ಲೇ ತಯಾರಾಗಿದೆ: ಎಸ್‌ಪಿ

ABOUT THE AUTHOR

...view details