ಕರ್ನಾಟಕ

karnataka

ETV Bharat / state

ಕರ್ತವ್ಯನಿರತ ಪೊಲೀಸ್ ಕಾನ್ಸ್​​ಟೇಬಲ್ ಮೇಲೆ ಹಲ್ಲೆ: ಆರೋಪಿ ಅಂದರ್​​ - man Attack on police constable

ಮಂಜುನಾಥ್ ಎನ್ನುವಾತ ನಿನ್ನೆ ಕುಂಸಿ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​​ ಪ್ರವೀಣ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದು, ಆತನನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ.

manjunath arrested
ಆರೋಪಿ ಮಂಜುನಾಥ್ ಅರೆಸ್ಟ್

By

Published : Jun 18, 2021, 1:11 PM IST

ಶಿವಮೊಗ್ಗ: ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಕುಂಸಿ ಪೊಲೀಸರು ಬಂಧಿಸಿದ್ದಾರೆ. ಹಾರನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ್ ಬಂಧಿತ ಆರೋಪಿ.

ನಿನ್ನೆ ಹಾರನಹಳ್ಳಿಯ ಪೆಟ್ರೋಲ್ ಬಂಕ್ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದ ವೇಳೆ ಕುಂಸಿ ಪೊಲೀಸ್ ಠಾಣೆಯ ಪ್ರವೀಣ್ ಕರ್ತವ್ಯದಲ್ಲಿದ್ದರು. ಈ ವೇಳೆ ಏಕಾಏಕಿ ಮಂಜುನಾಥ್ ಎನ್ನುವಾತ ಕಾನ್ಸ್​​ಟೇಬಲ್​​​ ಪ್ರವೀಣ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣ ಗ್ರಾಮಸ್ಥರು ಮಂಜುನಾಥ್​​ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡಿದ್ದ ಪ್ರವೀಣ್ ಚಿಕಿತ್ಸೆ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ:ವಿಶ್ವನಾಥ್ ಆಡಿಯೋ, ವಿಡಿಯೋ ಇದೆ, ಅದರಲ್ಲೇ ಅವರ ಸಂಸ್ಕೃತಿ ಗೊತ್ತಾಗುತ್ತೆ: ರೇಣುಕಾಚಾರ್ಯ

ABOUT THE AUTHOR

...view details