ಶಿವಮೊಗ್ಗ: ಅಪ್ಪಟ ಮಲೆನಾಡು ಪ್ರದೇಶದ ಹಸು ಅಂದ್ರೆ ಅದು ಮಲೆನಾಡು ಗಿಡ್ಡ. ಈ ಹಸು ಇತರೆ ತಳಿಯ ಹಸುಗಳಿಗಿಂತ ಹೆಚ್ಚಿನ ಜೀವಿತ ಅವಧಿಯನ್ನು ಹೊಂದಿದೆ. ಇಂತಹ ಮಲೆನಾಡು ಗಿಡ್ಡ ಹಸುಗಳು ಹೆಚ್ಚೆಂದರೆ 22 ವರ್ಷ ಬದುಕುತ್ತವೆ. ಆದರೆ ಈ ಹಸು ಮಾತ್ರ ಹೆಚ್ಚಿನ ವರ್ಷಗಳೇ ಬದುಕಿ ಸಾವಿಗೀಡಾಗಿದೆ.
ನಿಟ್ಟೂರು ಗ್ರಾಮ ಪಂಚಾಯತಿಯ ಕೊಳಕಿ ಗ್ರಾಮದ ಬೆಳ್ಳಿ ಎಂಬ ಮಲೆನಾಡು ಗಿಡ್ಡ ತಳಿಯ ಹಸು ಬರೋಬ್ಬರಿ 33 ವರ್ಷ ಬದುಕಿ ಸಾವನ್ನಪ್ಪಿದೆ. ಬೆಳ್ಳಿಯನ್ನು ಕೊಳಕಿ ಗ್ರಾಮದ ವಿಶ್ವೇಶ್ವರ ಹೆಗಡೆ ಎಂಬುವರು ಸಾಕಿದ್ದರು.