ಕರ್ನಾಟಕ

karnataka

ETV Bharat / state

ಜಿಲ್ಲಾ ಅಬಕಾರಿ ಅಧಿಕಾರಿ ಕಚೇರಿ ಮುಂದೆ ಸಾಗರ ತಾ.ಪಂ ಅಧ್ಯಕ್ಷರ ಧರಣಿ - Excise Office

ಜಿಲ್ಲಾ ಅಬಕಾರಿ ಅಧಿಕಾರಿ ಕ್ಯಾಪ್ಟನ್ ಅಜಿತ್ ಕುಮಾರ್, ಗಂಟೆ ಗಟ್ಟಲೆ ನಮ್ಮನ್ನು ಕಾಯಿಸಿ ನಮ್ಮ ಅಹವಾಲು ಕೇಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾಗರ ತಾಲೂಕು ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ಆರೋಪಿಸಿ ಕಚೇರಿ ಮುಂಭಾಗ ಕುಳಿತು ಧರಣಿ ನಡೆಸಿದ್ದಾರೆ.

protest
ಧರಣಿ

By

Published : Nov 3, 2020, 9:37 PM IST

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ‌ ಅಬಕಾರಿ ಅಧಿಕಾರಿ ಕಚೇರಿ ಎದುರು ಸಾಗರದ ತಾಲೂಕು ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ಹಾಗೂ ಇತರರು ಧರಣಿ ನಡೆಸಿದ್ದಾರೆ.

ಸಾಗರದಿಂದ ತಮ್ಮ ಕ್ಷೇತ್ರದ ಸಮಸ್ಯೆಯನ್ನು ಹೇಳಲು ಬಂದ್ರೆ, ಅಬಕಾರಿ ಜಿಲ್ಲಾಧಿಕಾರಿ‌ ಕ್ಯಾಪ್ಟನ್ ಅಜಿತ್ ಕುಮಾರ್ ರವರು ತಮಗೆ ಅವಕಾಶ ನೀಡಲಿಲ್ಲ. ನಾನೂರ್ವ ಜನಪ್ರತಿನಿಧಿ ಎಂದು ತಿಳಿದಿದ್ರು ಸಹ ನನ್ನನ್ನು ತಮ್ಮ ಕಚೇರಿಯ ಒಳಗೆ ಬಿಟ್ಟುಕೊಳ್ಳದೆ ಗಂಟೆಗಟ್ಟಲೆ ಕಾಯಿಸಿದ್ದಾರೆ. ಗಂಟೆ ಗಟ್ಟಲೆ ಕಾಯಿಸಿದ ಮೇಲೆ ನಮ್ಮ ಅಹವಾಲು ಕೇಳದೆ ನಿರ್ಲಕ್ಷ್ಯ ತೋರಿ ಈ ಮೂಲಕ ಅಧಿಕಾರಿಯಾಗಿ ನನ್ನಂತಹ‌ ಜನಪ್ರತಿನಿಧಿಯನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾಗರ ತಾಲೂಕು ಪಂಚಾಯತಿ ಅಧ್ಯಕ್ಷ ಮಲ್ಲಿಕಾರ್ಜುನ್ ಹಕ್ರೆ ಧರಣಿ

ಸಾಗರ ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಅಲ್ಲದೆ ಆವಿನಹಳ್ಳಿ ಗ್ರಾಮಕ್ಕೆ ಹಿಂದೆ ರದ್ದಾಗಿದ್ದ ಎಂಎಸ್ಐಎಲ್ ಅಂಗಡಿ ಮತ್ತೆ ತರಲು ಯತ್ನ ಮಾಡುತ್ತಿದ್ದಾರೆ. ಇದಕ್ಕೆ ಅವರು ಸಾಕಷ್ಟು‌ ಹಣ ಪಡೆದಿದ್ದಾರೆ ಎಂದು ನೇರ ಆರೋಪ ಮಾಡಿದರು.‌ ತಮ್ಮ ಕ್ಷೇತ್ರದಲ್ಲಿ ನಕಲಿ ಮದ್ಯದ ಮಾರಾಟ ನಡೆಸಲಾಗುತ್ತಿದೆ. ಇಲ್ಲಿ ಹುಬ್ಬಳ್ಳಿಯಿಂದ ತಂದ ನಕಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಾತನಾಡಲು ಪೋನ್ ಮಾಡಿ ಕೊಂಡು ಬಂದ್ರು ಸಹ‌ ಕ್ಯಾಪ್ಟನ್ ಅಜಿತ್ ಕುಮಾರ್ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಆರೋಪಿಸಿ‌ ಕಚೇರಿ ಮುಂಭಾಗದ‌ ಮೆಟ್ಟಿಲ‌ ಮೇಲೆ ಕುಳಿತು ಧರಣಿ ನಡೆಸಿದ್ದಾರೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಅಬಕಾರಿ ಅಧಿಕಾರಿ ಕ್ಯಾಪ್ಟನ್ ಅಜಿತ್ ಕುಮಾರ್, ಮೊದಲನೆಯದಾಗಿ ಅವರು ಒಳಗೆ ಬಂದು ಏಕಾಏಕಿ ಕೆಳಗೆ ಕುಳಿತು ಧಿಕ್ಕಾರ ಹಾಕ ತೂಡಗಿದರು. ಅವರು ತಮ್ಮ‌ ಪರಿಚಯವನ್ನು ಹೇಳದೆ ತಮ್ಮವರೊಂದಿಗೆ ಬಂದು ಈ ರೀತಿ ಮಾಡಿದ್ದು ನಮಗೂ ಆಶ್ಚರ್ಯವನ್ನುಂಟು ಮಾಡಿತು. ಅವರು ತಮ್ಮ ಮನವಿಯನ್ನು ನೀಡಲಿಲ್ಲ. ಬಂದ‌ ಕಾರಣವನ್ನು ತಿಳಿಸದೆ ಈ ರೀತಿ ಮಾಡಿದ್ದು ಸರಿಯಲ್ಲ ಎಂದರು. ಓರ್ವ ಜನಪ್ರತಿನಿಧಿಯಾಗಿ ಮಲ್ಲಿಕಾರ್ಜುನ್ ಹಕ್ರೆ ಜಿಲ್ಲಾ ಮಟ್ಟದ ಅಧಿಕಾರಿಯ ಜೊತೆ ಈ ರೀತಿ ನಡೆದು ಕೊಂಡಿದ್ದು‌ ಎಷ್ಟು ಸರಿ ಎಂಬ ಪ್ರಶ್ನೆ ಎಲ್ಲಾರಲ್ಲೂ ಮೂಡಿದೆ.

ABOUT THE AUTHOR

...view details