ಕರ್ನಾಟಕ

karnataka

ETV Bharat / state

ಮಹಾತ್ಮ ಗಾಂಧಿ 150ನೇ ಜನ್ಮ ದಿನ ಹಿನ್ನೆಲೆ.. ನೂತನ ಗೀತೆ ಬಿಡುಗಡೆ!

150ನೇ ಜನ್ಮ ದಿನದ ಪ್ರಯುಕ್ತ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳನ್ನ ಒಳಗೊಂಡ ಗೀತೆಯನ್ನ ಬಿಡುಗಡೆ ಮಾಡಲಾಗಿದೆ.

ಗಾಂಧೀಜಿ ಕುರಿತ ಗೀತೆ ಬಿಡುಗಡೆ

By

Published : Sep 28, 2019, 10:48 PM IST

ಶಿವಮೊಗ್ಗ:ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನದ ಪ್ರಯುಕ್ತ ಗಾಂಧೀಜಿ ಅವರ ಅಪರೂಪದ ಛಾಯಾಚಿತ್ರಗಳನ್ನ ಒಳಗೊಂಡ ಗೀತೆಯನ್ನ ಬಿಡುಗಡೆ ಮಾಡಲಾಗಿದೆ.

ಗಾಂಧೀಜಿ ಕುರಿತ ಗೀತೆ ಬಿಡುಗಡೆ

ಶಿವಮೊಗ್ಗ ನಗರದ ಪತ್ರಿಕಾಭವನದಲ್ಲಿ ಪ್ರೆಸ್​ ಟ್ರಸ್ಟ್​ನ ಅಧ್ಯಕ್ಷರಾದ ಮಂಜುನಾಥ್ ಅವರು ಈ ಹಾಡನ್ನ ಬಿಡುಗಡೆಗೊಳಿಸಿದರು. 'ನಿನ್ನ ಪ್ರತಿಮೆಯ ನಿಲ್ಲಿಸಿ ನಾವು ಮೆರೆಯುವುದು ವ್ಯರ್ಥ' ಎಂಬ ಈ ಗೀತೆಯನ್ನ ಖ್ಯಾತ ಕವಿ ದಿನಕರ ದೇಸಾಯಿಯವರು ರಚನೆ ಮಾಡಿದ್ದಾರೆ.

ಛಾಯಾಚಿತ್ರಗಾರ ಶಿವಮೊಗ್ಗ ನಂದನ್ ಅವರು ಈ ವಿಡಿಯೋ ಸಾಂಗ್ ನಿರ್ಮಾಣದ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿ ಸಿದ್ದಪಡಿಸಿದ್ದಾರೆ. ಮಲೆನಾಡಿನ ಪ್ರಸಿದ್ಧ ಗಾಯಕಿ ಸುರೇಖಾ ಹೆಗಡೆ ಅವರು ಈ ಹಾಡಿಗೆ ಧ್ವನಿಗೂಡಿಸಿದ್ದು, ಈ ಹಾಡನ್ನು ಯೂಟ್ಯೂಬ್​ಗೆ ಅಪ್ಲೋಡ್ ಮಾಡಲಾದೆ.

ಈ ಕುರಿತು ಮಾತನಾಡಿದ ಗಾಯಕಿ ಸುರೇಖಾ ಹೆಗಡೆ, ಗಾಂಧೀಜಿ ಅವರ ಕುರಿತಂತೆ ಸಾವಿರಾರು ಹಾಡುಗಳು ಬಂದಿವೆ. ಆದರೆ ಈ ಹಾಡು ತುಂಬಾ ಆಪ್ತವಾಗಿದೆ. ನಾಡಿನ ಪ್ರಸಿದ್ಧ ಕವಿ ದಿನಕರ ದೇಸಾಯಿ ಗಾಂಧೀಜಿ ಕುರಿತಂತೆ ಎಳೆ ಎಳೆಯಾಗಿ ತಮ್ಮ ಪದಗಳಲ್ಲಿ ಹೇಳಿದ್ದಾರೆ. ಈ ಗೀತೆಯನ್ನ ಹಾಡಲು ಖುಷಿಯಾಗಿದೆ ಎಂದಿದ್ದಾರೆ.

ABOUT THE AUTHOR

...view details