ಶಿವಮೊಗ್ಗ:ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್. ಎಂ. ಚಂದ್ರಶೇಖರಪ್ಪ,ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದೆ ಪಕ್ಷಕ್ಕೆ ಮುಳುವಾಗಿದೆ ಜೊತೆಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ಕಡೆಗಣಿಸಿರುವುದೇ ಸೋಲಿಗೆ ಪ್ರಮುಖ ಕಾರಣ ಎಂದರು.
ಸಾಮಾನ್ಯ ಕಾರ್ಯಕರ್ತರನ್ನ ಕಡೆಗಣಿಸಿದ್ದೇ ಮಧುಬಂಗಾರಪ್ಪ ಸೋಲಿಗೆ ಕಾರಣ: ಹೆಚ್. ಎಂ. ಚಂದ್ರಶೇಖರಪ್ಪ - shimogga
ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಸೋತಿದ್ದು ಸಾಮಾನ್ಯ ಕಾರ್ಯಕರ್ತರನ್ನ ಕಡೆಗಣಿಸಿದ್ದರಿಂದಲೇ ಎಂದು ಮಾಜಿ ಶಾಸಕರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್. ಎಂ. ಚಂದ್ರಶೇಖರಪ್ಪ ಆರೋಪಿಸಿದ್ದಾರೆ.
ಚುನಾವಣೆ ವಿಷಯ ಬಂದಾಗ ಮೈತ್ರಿ ಮಾಡಿಕೊಳ್ಳುವುದು ಅಷ್ಟೊಂದು ಸರಿಯಾದದ್ದಲ್ಲ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್, ಸ್ಥಳೀಯ ಪಕ್ಷದೊಡನೆ ಕೈಜೋಡಿಸಿದ್ದು ಕೂಡ ಕಾಂಗ್ರೆಸ್ ಪಕ್ಷದ ಸೋಲಿಗೆ ಪ್ರಮುಖ ಕಾರಣವಾಗಿದೆ ಎಂದರು. ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರನ್ನು ಕಡೆಗಣಿಸಲಾಯಿತು .ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರ ನಡುವೆ ಚರ್ಚೆ ಆಗಬೇಕಿತ್ತು. ಆದರೆ ಜಿಲ್ಲೆಯಲ್ಲಿ ಯಾರು ಕೂಡ ಈ ಬಗ್ಗೆ ಚರ್ಚಿಸಿಲ್ಲ ಕೆಲ ನಾಯಕರು ಮಾತ್ರ ಮಾತನಾಡಿ ಅಭ್ಯರ್ಥಿಯನ್ನು ಘೋಷಿಸಲಾಯಿತು. ಇದು ಕೂಡ ಸೋಲಿಗೆ ಒಂದು ಪ್ರಮುಖ ಕಾರಣ ಎಂದರು .
ವೀರಶೈವ ಮುಖಂಡರನ್ನು ಕೂಡ ಕಾಂಗ್ರೆಸ್ ಕಡೆಗಣಿಸಿ ಕೆಲವು ಜಾತಿಗಳಿಗೆ ಮಣೆ ಹಾಕಿದೆ. ಒಂದು ಪ್ರಬಲ ಜಾತಿಯನ್ನು ಕಡೆಗಣಿಸುವುದು ಕೂಡ ಸೂಕ್ತವಲ್ಲ .ಕಾಂಗ್ರೆಸ್ ಇನ್ಮುಂದೆಯಾದರೂ ಇಂತಹ ಸಣ್ಣ ಪುಟ್ಟ ತಪ್ಪುಗಳನ್ನು ಮಾಡದೆ ಯಾರೊಂದಿಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳದೆ ಸಂಘಟನೆಗೆ ಒತ್ತು ಕೊಟ್ಟರೆ ಬಹುಶಃ ಕಾಂಗ್ರೆಸ್ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.
TAGGED:
shimogga