ಶಿವಮೊಗ್ಗ:ರಾಹುಲ್ ಗಾಂಧಿ ಪರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ ಎನಿಸುತ್ತದೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕಾನೂನು ರೀತಿ ಬಂದಿರುವ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಈ ವಿಚಾರದಲ್ಲಿ ರಾಹುಲ್ ಗಾಂಧಿ ಧೈರ್ಯ ಮೆಚ್ಚಲೇಬೇಕು. ದೇಶವನ್ನು ಸುತ್ತುವುದರ ಜೊತೆಗೆ ಈ ರೀತಿಯ ಪರೀಕ್ಷೆಯನ್ನು ಅನುಭವಿಸಿ ಜಯ ಗಳಿಸಿದ್ದಾರೆ ಎಂದರು.
ವಿಐಎಸ್ ಎಲ್ ಕಾರ್ಖಾನೆ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ ಬಂದ್ ಮಾಡುತ್ತೇವೆ ಎಂದು ಎಲ್ಲೂ ಹೇಳಿರಲಿಲ್ಲ. ಇಲ್ಲಿನ ಜನಪ್ರತಿನಿಧಿಗಳು, ಸಂಸದರು ಮಧ್ಯ ಮಧ್ಯ ಬಂದು ಬೇರೆ ಬೇರೆ ಹೇಳಿಕೆ ಕೊಟ್ಟರು. ಇನ್ನೊಂದು 7 ತಿಂಗಳಿಗೆ ಲೋಕಸಭೆ ಚುನಾವಣೆ ಬರಲಿದೆ. ವಿಐಎಎಸ್ಎಲ್ಗೆ ತಾತ್ಕಾಲಿಕವಾಗಿ ಚಾಲನೆ ಕೊಟ್ಟಿದ್ದಾರೆ. ಪೂರ್ಣವಾಗಿ ಚಾಲನೆ ಕೊಟ್ಟರೆ ಒಳ್ಳೆಯದು ಎಂದರು. ಕಾರ್ಖಾನೆ ಮುಚ್ಚದೇ ಮುಂದುವರಿಸಿದರೆ ಒಳ್ಳೆಯದು.
ಮುಂದುವರೆದು, ವಿಐಎಸ್ ಎಲ್ ಎಂಪಿಎಂ ಕಾರ್ಖಾನೆ ಶಿವಮೊಗ್ಗ ಜಿಲ್ಲೆಗೆ ಕಿರೀಟ. ಕಾರ್ಖಾನೆ ನಡೆಸಲು ಹೊರೆ ಇರುತ್ತದೆ. ಅದನ್ನು ಉಳಿಸುವುದು ಕೇಂದ್ರ ಸರಕಾರದ ಕೈಯಲ್ಲಿರುತ್ತದೆ. ಯಾರು ಯಾರು ಬಿಟ್ಟು ಹೋಗಿದ್ದಾರೆ. ಅವರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ಜೊತೆ ಚರ್ಚೆ ಮಾಡಿದ್ದೇನೆ ಎಂದರು.