ಶಿವಮೊಗ್ಗ:ಮೈತ್ರಿ ಪಕ್ಷದ ಕಾರ್ಯಕರ್ತರಿಗೆ ಹಾಗೂ ಜಿಲ್ಲೆಯ ಮತದಾರರಿಗೆ ಮಾಜಿ ಶಾಸಕ ಮಧು ಬಂಗಾರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ.ಇಲ್ಲಿನ ಲಗಾನ್ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ - ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಕೃತಜ್ಞತಾ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ನನ್ನ ಸೋಲಿಗಿಂತ ಹಿರಿಯರ ಸೋಲು ನೋವುಂಟು ಮಾಡಿದೆ: ಮಾಜಿ ಸಿಎಂ ಪುತ್ರನ ಬೇಸರ - kannada news
ಬಿಜೆಪಿಯನ್ನ ನೀವು ಆರಿಸಿ ತಂದಿದ್ದೀರಿ. ಅದರಲ್ಲಿ ತಪ್ಪಿಲ್ಲ. ಆದರೆ, ಅವರು ನಿಮ್ಮ ಒಲವಿಗೆ ಸ್ಪಂದಿಸದೇ ಇದ್ದರೆ ಏನು ಮಾಡುತ್ತೀರಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಬಳಿಕ ಮಾತನಾಡಿದ ಮಧು ಬಂಗಾರಪ್ಪ, ಚುನಾವಣೆ ಸೋಲಿನಿಂದ ನಾನು ಕಂಗೆಟ್ಟಿಲ್ಲ. ಕಾರ್ಯಕರ್ತರ ಜೊತೆ ನಾನಿದ್ದೇನೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಯಾವ ಕೆಲಸ ಬೇಕಾದರೂ ಮಾಡಿಸಿಕೊಂಡು ಬರುತ್ತೇನೆ. ಆದರೆ, ನನಗೆ ನನ್ನ ಸೋಲಿಗಿಂತ ಮೈತ್ರಿ ಪಕ್ಷದ ಹಿರಿಯರ ಸೋಲು ನೋವುಂಟು ಮಾಡಿದೆ ಎಂದು ನೊಂದುಕೊಂಡರು.
ಮತದಾರರಲ್ಲಿ ನನ್ನದೊಂದು ಪ್ರಶ್ನೆ ಇದೆ. ಬಿಜೆಪಿ ಪಕ್ಷಕ್ಕೆ ಒಲವು ತೋರಿ ಮತ ನೀಡಿದ್ದೀರಿ. ಆದರೆ, ನಿಮ್ಮ ಒಲವಿಗೆ ಅವರು ಸ್ಪಂದಿಸದೇ ಇದ್ದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಸನ್ಮಾನ ಮಾಡಲಾಯಿತು.