ಕರ್ನಾಟಕ

karnataka

ETV Bharat / state

ವಿದೇಶಿ ಬೆಳೆ, ಭಾರತದಲ್ಲಿ ಬೇಡಿಕೆ: ಮೆಕಾಡೊಮಿಯ ಬಗ್ಗೆ ಒಂದಿಷ್ಟು ಮಾಹಿತಿ.. - ಈಟಿವಿ ಭಾರತ ಕನ್ನಡ

ವಿದೇಶಗಳಲ್ಲಿ ಹೆಚ್ಚಾಗಿ ಬೆಳೆಯುವ ಮೆಕಾಡೊಮಿಯ ಬೆಳೆಯನ್ನು ಶಿವಮೊಗ್ಗ ತಾಲೂಕಿನ ರೈತ ಕೃಷ್ಣ ಎಂಬವರು ಬೆಳೆದಿದ್ದಾರೆ.

ಮೆಕಾಡೊಮಿಯ ಬೆಳೆ
ಮೆಕಾಡೊಮಿಯ ಬೆಳೆ

By

Published : Mar 15, 2023, 11:13 AM IST

Updated : Mar 15, 2023, 11:26 AM IST

ಮೆಕಾಡೊಮಿಯ ಬೆಳೆ ಬಗ್ಗೆ ಮಾಹಿತಿ ನೀಡಿದ ರೈತ

ಶಿವಮೊಗ್ಗ: ವಿದೇಶದಲ್ಲಿ ಪ್ರಸಿದ್ಧವಾದ ಮೆಕಾಡೊಮಿಯ ಬೆಳೆ ಈಗ ಮಲೆನಾಡಿನ ಜನರ ಕೈ ಹಿಡಿಯಲು ಮುಂದಾಗುತ್ತಿದೆ. ಈ ಬೆಳೆಯು ಆಸ್ಟ್ರೇಲಿಯಾದಿಂದ ಮಲೆನಾಡಿಗೆ ಬಂದಿದೆ. ಈಗ ಇದರ ಘಮಲು ಮಲೆನಾಡಿನ ತುಂಬೆಲ್ಲ ಪಸರಿಸುತ್ತಿದೆ. ಮೆಕಾಡೊಮಿಯ ಒಂದು ಸಿಹಿ ಸ್ವಾದ ಹೊಂದಿದ ಕಾಯಿ. ಕೋಕೊ ಸೇರಿದಂತೆ ಬಾದಾಮಿ ಹಾಗೂ ಗೇರು ಬೀಜದ ರೀತಿ‌ಯ ಸಿಹಿ ಅಂಶ ಇದರಲ್ಲಿದೆ. ಇದನ್ನು ಸಂಸ್ಕರಿಸಿದ ನಂತರ ಮಾರಾಟ ಮಾಡಬಹುದು.

ಮೆಕಾಡೊಮಿಯ ಬೆಳೆಯನ್ನು ಆಸ್ಟ್ರೇಲಿಯಾ, ಅಮೆರಿಕ ದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದರ ಮರ 18 ಮೀಟರ್​ ಎತ್ತರ ಬೆಳೆಯುತ್ತದೆ. ಎಲೆಗಳು 7 ರಿಂದ 25 ಸೆಂ.ಮೀ ನಷ್ಟು ಉದ್ದ ಇರುತ್ತದೆ. ಹೂ ಕೆನೆ ಗುಲಾಬಿ ಮತ್ತು ನೇರಳೆ ಬಣ್ಣದ್ದಾಗಿದೆ. ಕಪ್ಪು ಮಣ್ಣಿಗೆ ಹೊಂದಿಕೊಳ್ಳುವ ಬೆಳೆಯಾಗಿದ್ದು ಹೆಚ್ಚಿನ ಫಸಲು ನೀಡಬಲ್ಲದು. ಒಂದು ಎಕರೆ ಅಡಕೆ ತೋಟಕ್ಕೆ ಬೇಕಾದ ನೀರಿನಲ್ಲಿ ನಾಲ್ಕು ಎಕರೆ ಮೆಕಾಡೊಮಿಯ ಬೆಳೆಯಬಹುದು. ನೆಡಲು ಮತ್ತು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಕೊಂಚ ಖರ್ಚು ತಗಲುತ್ತದೆ. ನಾಲ್ಕು ವರ್ಷದ ನಂತರ ಫಸಲು ನೀಡುತ್ತದೆ. ಅಷ್ಟು ಸಮಯ ಇದರೊಂದಿಗೆ ಮಿಶ್ರತಳಿಯಾಗಿ ಸೀಬೆ ಹಣ್ಣು, ರೇಷ್ಮೆ, ಶೇಂಗಾ, ಎಳ್ಳು, ರಾಗಿ ಹೀಗೆ ಕಡಿಮೆ ನೀರು ಬಯಸುವ ಬೆಳೆಗಳನ್ನೂ ಬೆಳೆಯಬಹುದು.

ಸದ್ಯ ಈ ಬೆಳೆಯನ್ನು ಶಿವಮೊಗ್ಗ ತಾಲೂಕು ಗಾಜನೂರಿನ ಕೃಷ್ಣ ಎಂಬವರು ಬೆಳೆಯುತ್ತಿದ್ದಾರೆ. ಇವರಿಗೆ ಕಳೆದ 17 ವರ್ಷಗಳ ಹಿಂದೆ ಆಸ್ಟ್ರೇಲಿಯಾ ಮೂಲದವರೊಬ್ಬರು ಇದನ್ನು ಪರಿಚಯಿಸಿದರಂತೆ. ಪೂರ್ಣ ಮಾಹಿತಿ ಪಡೆದ ಕೃಷ್ಣ, ಸಸಿ ನೆಟ್ಟು ಗಿಡ ಬೆಳೆಸಲು ಪ್ರಾರಂಭಿಸಿದ್ದಾರೆ. "ಮೊದಲ ಬಾರಿಗೆ ಅಡಕೆ ಮರದ ಜೊತೆಗೆ ನಮ್ಮ ತೋಟದಲ್ಲಿ ಹೇಗೆ ಬೇಕೋ ಹಾಗೆ ಮೆಕಾಡೊಮಿಯ ಸಸಿ ನೆಟ್ಟೆವು‌. ನಂತರ ಇದು ಬಯಲು ಪ್ರದೇಶ ಹಾಗೂ ಬಿಸಿಲು ಬಯಸುತ್ತದೆ ಎಂದು ತಿಳಿದು ಬಯಲು ಪ್ರದೇಶದಲ್ಲಿ ಗಿಡ ನಾಟಿ ಮಾಡಿದೆವು. ನೆಟ್ಟ 4 ವರ್ಷಕ್ಕೆ ಹೂವು ಬಿಡಲು ಪ್ರಾರಂಭಿಸಿತು. ಈಗ 14 ವರ್ಷದ ಗಿಡ ನಮ್ಮ ಬಳಿ ಇದೆ. ಕಳೆದ ವರ್ಷ ಕಟಾವು ಮಾಡಿದಾಗ ಒಂದು ಗಿಡದಿಂದ 36 ಕೆ.ಜಿ ಫಸಲು ಬಂದಿದೆ. ಇದರಲ್ಲಿ ಎರಡು ಪದರಗಳಿರುತ್ತವೆ. ಇನ್ನರ್‌ನಲ್ಲಿ ಒಂದು ಸೆಲ್ ಇರುತ್ತದೆ. ನಂತರ ಪಲ್ಪ್ ಸಿಗುತ್ತದೆ. ಇದಕ್ಕೆ ಮಾರುಕಟ್ಟೆಯಲ್ಲಿ ತುಂಬ ಬೇಡಿಕೆ ಇದೆ" ಎಂದು ವಿವರಿಸಿದರು.

ಸಿಹಿ ಪದಾರ್ಥಕ್ಕೆ ಬಳಕೆ:ಭಾರತಕ್ಕೆ ಕೋಟ್ಯಂತರ ರೂಪಾಯಿಯ ಮೆಕಾಡೊಮಿಯ ಬೆಳೆ ಆಮದಾಗುತ್ತಿದೆ. ಈ ಬೆಳೆಯನ್ನು ಚಾಕಲೇಟು, ಐಸ್ ಕ್ರೀಂ ತಯಾರಿಗೆ ಬಳಕೆ ಮಾಡಲಾಗುತ್ತಿದೆ. ವಿದೇಶದಲ್ಲಿ ಮೆಕಾಡೊಮಿಯ ಪ್ರಥಮ ದರ್ಜೆ ಬೀಜಕ್ಕೆ 3,500 ರೂ ಬೆಲೆ ಇದೆ. ಭಾರತದಲ್ಲಿ ಈ ಬೆಳೆ ಪ್ರತಿ‌‌‌ ಕೆ.ಜಿಗೆ 2 ಸಾವಿರಕ್ಕೆ ಮಾರಾಟ ಮಾಡಬಹುದು. ಮೆಕಾಡೊಮಿಯ ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆ ಇದ್ದವರಿಗೆ ವಿದೇಶದಲ್ಲಿ ಮೆಕಾಡೊಮಿಯದ ಬೀಜ ತಿನ್ನಲು ವೈದ್ಯರು ಸೂಚಿಸುತ್ತಾರೆ ಎಂದು ಕೃಷ್ಣ ಮಾಹಿತಿ ನೀಡಿದರು.

ಇದನ್ನೂ ಓದಿ:ಹವಾಮಾನಕ್ಕೆ ತಕ್ಕಂತೆ ಬೆಳೆ.. ಮಿಶ್ರ ಬೇಸಾಯದಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿರುವ ಕಲಬುರಗಿ ರೈತ

Last Updated : Mar 15, 2023, 11:26 AM IST

ABOUT THE AUTHOR

...view details