ಕರ್ನಾಟಕ

karnataka

ETV Bharat / state

ಆಗುಂಬೆ ಘಾಟಿಯಲ್ಲಿ ಲಾರಿ ಪಲ್ಟಿ: ನಾಲ್ವರ ಸಾವು - ಆಗುಂಬೆ ಅಪಘಾತ

ಆಗುಂಬೆ ಘಾಟಿಯಲ್ಲಿ ಪ್ರಪಾತಕ್ಕೆ ಲಾರಿ ಉರುಳಿ ಬಿದ್ದು ನಾಲ್ವರು ಮೃತಪಟ್ಟ ಘಟನೆ ನಡೆದಿದೆ.

accident
accident

By

Published : Oct 29, 2021, 6:44 PM IST

ಶಿವಮೊಗ್ಗ:ಆಗುಂಬೆ ಘಾಟಿಯ 9ನೇ ತಿರುವಿನಲ್ಲಿ ಲಾರಿ ಪಲ್ಟಿಯಾಗಿ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯಿಂದ ಉಡುಪಿ ಕಡೆ ಹೊರಟ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಲಾರಿ ಪ್ರಪಾತಕ್ಕೆ ಬೀಳುತ್ತಿದ್ದಂತಯೇ ಇತರ ವಾಹನ ಸವಾರರು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮತ್ತೆ ಕೆಲವರು ಲಾರಿ ಬಿದ್ದ ಸ್ಥಳಕ್ಕೆ ಹೋಗಿ ಗಾಯಾಳುಗಳನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮೃತರಾದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಹೆಬ್ರಿ ಹಾಗೂ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

ABOUT THE AUTHOR

...view details