ಶಿವಮೊಗ್ಗ: ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಸರ್ಕಾರ ನೀಡಿದ ಸಹಾಯಧನದ ಬ್ಯಾಂಕ್ ಪ್ರಮಾಣ ಪತ್ರ ನೀಡಲು 5 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅಜ್ಜಪ್ಪ ಎಂಬವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗದ ಗಂಗಾಧರ್ ಎಂಬಾತ ಟ್ಯಾಕ್ಸಿ ಚಾಲಕರಾಗಿದ್ದು ಪ್ರವಾಸಿ ಟ್ಯಾಕ್ಸಿ ಯೋಜನೆಯಡಿಯಲ್ಲಿ ಕಾರ್ ಲೋನ್ ಮಂಜೂರು ಆಗಿದ್ದು, ಸರ್ಕಾರದ ವತಿಯಿಂದ 3 ಲಕ್ಷ ರೂ. ಸಹಾಯಧನ ಸಹ ಲಭ್ಯವಾಗುತ್ತದೆ. ಗಂಗಾಧರ ಅವರಿಗೆ ಬ್ಯಾಂಕ್ನಿಂದ ಲಭ್ಯವಾದ ಸಹಾಯಧನದ ಪ್ರಮಾಣ ಪತ್ರವನ್ನು ನೀಡಲು ಅಜ್ಜಪ್ಪ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.