ಶಿವಮೊಗ್ಗ: ಡೆಡ್ಲಿ ವೈರಸ್ನಿಂದ ಹೊರಬರಲು ರಾಜಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹೀಗಾಗಿ ಕೆಲವರ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ರೈತರು ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ.
ರೈತರ ಬೆಳೆಗೆ ಸಿಗ್ತಿಲ್ಲ ಬೆಲೆ... ಕಲ್ಲಂಗಡಿ ಬೆಳೆ ನಾಶ ಮಾಡಿದ ರೈತರು - ಕಲ್ಲಂಗಡಿ ಬೆಳೆ ನಾಡ ಮಾಡಿದ ರೈತರು
ಲಾಕ್ಡೌನ್ ಹೇರಿಕೆ ಮಾಡಿರುವ ಕಾರಣ ಅನ್ನದಾತರು ಬೆಳೆದಿರುವ ಬೆಲೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಅದನ್ನ ನಾಶ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.

Shimoga
ಕಲ್ಲಂಗಡಿ ಬೆಳೆ ನಾಶ ಮಾಡಿದ ರೈತರು
ಹೌದು, ನಾಡಿನ ಜನತೆಗೆ ಬೆಳಕು ನೀಡಿದ ಶರಾವತಿ ಹಿನ್ನೀರಿನ ರೈತರ ಗೋಳು ಹೇಳ ತೀರದಾಗಿದೆ. ಶರಾವತಿ ಹಿನ್ನೀರಿನ ಪ್ರದೇಶಗಳಾದ ಕರೂರು, ಬ್ಯಾಕೋಡು ಭಾಗದ ರೈತರು ಕಲ್ಲಂಗಡಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ತಾವು ಬೆಳೆದಿರುವ ಬೆಳೆ ಖುದ್ದಾಗಿ ನಾಶ ಮಾಡುತ್ತಿದ್ದಾರೆ.
ಈ ಭಾಗದಲಿ ಹತ್ತಾರು ರೈತರು ತಮ್ಮ ಜಮೀನುಗಳಲ್ಲಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್ಡೌನ್ ಕಾರಣ ಸೂಕ್ತ ಬೆಲೆ ಸಿಗದೇ ಸಂಕಷ್ಟಕ್ಕೊಳಗಾಗಿದ್ದಾರೆ. ಹೀಗಾಗಿ ತಮಗೆ ಸೂಕ್ತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.
Last Updated : May 27, 2021, 5:37 AM IST