ಶಿವಮೊಗ್ಗ: ಲಾಕ್ಡೌನ್ ಆದೇಶದಿಂದ ಅನಗತ್ಯ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕೆಲ ಬೈಕ್ ಸವಾರರು ರಸ್ತೆಗೆ ಇಳಿದಿದ್ದಾರೆ. ಅಂತವರಿಗೆ ರಸ್ತೆಯಲ್ಲಿಯೇ ಪೊಲೀಸರು ಬಸ್ಕಿ ಹೊಡೆಸಿದ್ದಾರೆ.
ಸೊರಬ: ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್ ಸವಾರರಿಗೆ ಬಸ್ಕಿ ಶಿಕ್ಷೆ! - ಶಿವಮೊಗ್ಗದಲ್ಲಿ ಲಾಕ್ಡೌನ್ ಉಲ್ಲಂಘನೆ
ಲಾಕ್ಡೌನ್ ಆದೇಶ ಉಲ್ಲಂಘಿಸಿ ಸಂಚರಿಸಿ ಬೈಕ್ ಸವಾರರಿಗೆ ಸೊರಬ ಪೊಲೀಸರು ಬಸ್ಕಿ ಶಿಕ್ಷೆ ನೀಡಿದ್ದಾರೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.

ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್ ಸವಾರರಿಗೆ ಬಸ್ಕಿ ಶಿಕ್ಷೆ
ಅನಗತ್ಯವಾಗಿ ರಸ್ತೆಗೆ ಇಳಿದ ಬೈಕ್ ಸವಾರರಿಗೆ ಬಸ್ಕಿ ಶಿಕ್ಷೆ
ಜಿಲ್ಲೆಯ ಸೊರಬ ಪಟ್ಟಣದ ರಂಗನಾಥ ದೇವಾಲಯದ ರಸ್ತೆಯಲ್ಲಿ ತಹಶೀಲ್ದಾರ್ ಪುಟ್ಟರಾಜ ಗೌಡ ಹಾಗೂ ಸಿಪಿಐ ಲಾಠಿ ಹಿಡಿದು ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮುಂದಾದರು. ಕಾರು, ಬೈಕ್ನಲ್ಲಿ ಅನಗತ್ಯ ಸುತ್ತುವವರನ್ನು ಹಿಡಿದು ಸರ್ಕಾರದ ಲಾಕ್ಡೌನ್ ಪಾಲಿಸಬೇಕು ಎಂದು ಬುದ್ಧಿ ಹೇಳಿದರು.
ಸದ್ಯ ಈ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.