ಶಿವಮೊಗ್ಗ: ಇಂದು ಸಂಪೂರ್ಣ ಲಾಕ್ ಡೌನ್ ನಡುವೆಯೂ ಸಹ ಅನಗತ್ಯವಾಗಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ಸಂಚಾರಿ ಪೋಲಿಸರು ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಿದ್ದಾರೆ.
ಲಾಕ್ಡೌನ್ ನಡುವೆ ಓಡಾಡಿದ ಜನಕ್ಕೆ ಶಿವಮೊಗ್ಗ ಪೊಲೀಸರ ಕ್ಲಾಸ್ - Corona cases in Shimoga
ಶಿವಮೊಗ್ಗದಲ್ಲಿ ಇಂದು ಸಂಪೂರ್ಣ ಲಾಕ್ಡೌನ್ ಮಾಡಲಾಗಿತ್ತು. ಆದರು ಸಹ ಕೆಲವರು ಅನಗತ್ಯವಾಗಿ ಓಡಾಡಿ ನಿಯಮ ಮೀರಿದ್ದಾರೆ.

ಲಾಕ್ಡೌನ್ ನಡುವೆ ಓಡಾಡಿದ ಜನಕ್ಕೆ ಶಿವಮೊಗ್ಗ ಪೊಲೀಸರ ಕ್ಲಾಸ್
ಲಾಕ್ಡೌನ್ ನಡುವೆ ಓಡಾಡಿದ ಜನಕ್ಕೆ ಶಿವಮೊಗ್ಗ ಪೊಲೀಸರ ಕ್ಲಾಸ್
ನಗರದ ಹಾಲ್ಕೋಳ ಸರ್ಕಲ್ನಲ್ಲಿ ಅನಗತ್ಯವಾಗಿ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದವರಿಗೆ ಮಾಸ್ಕ್ ನೀಡಿ ಜಾಗೃತಿ ಮೂಡಿಸಿದ್ದಾರೆ.ಬೈಕ್ನಲ್ಲಿ ಒಬ್ಬರು ಓಡಾಡಿ, ಕಾರಿನಲ್ಲಿ ಮೂರು ಜನಕ್ಕಿಂತ ಹೆಚ್ಚು ಜನ ಪ್ರಯಾಣಿಸಬೇಡಿ.
ನಿಮ್ಮ ಆರೋಗ್ಯದ ದೃಷ್ಟಿಯಿಂದಲೇ ಹೇಳುತ್ತಿದ್ದೇವೆ ಎಂದು ಸವಾರರಿಗೆ ಮನವಿ ಮಾಡಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದರು.