ಶಿವಮೊಗ್ಗ: ಕೊರೊನಾ ವೈರಸ್ ವಿಚಾರದಲ್ಲಿ ಸದ್ಯ ಜಿಲ್ಲೆ ಗ್ರೀನ್ ಝೋನ್ನಲ್ಲಿದ್ದು, ಇದನ್ನು ಹೀಗೆ ಮುಂದುವರೆಸಲು ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ
ಶಿವಮೊಗ್ಗದಲ್ಲಿ ಬಿಗಿಗೊಂಡ ಲಾಕ್ಡೌನ್: ಚೆಕ್ ಪೋಸ್ಟ್ಗಳಲ್ಲಿ ಹೈ ಅಲರ್ಟ್ - Lockdown in Shimoga
ಶಿವಮೊಗ್ಗ ಜಿಲ್ಲೆ ಕೊರೊನಾ ಕಂಟಕದಿಂದ ಸದ್ಯ ಪಾರಾಗಿ ಗ್ರೀನ್ ಝೋನ್ ಆಗಿ ಗುರುತಿಸಿಕೊಂಡಿದೆ. ಇದನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗಲು ಜಿಲ್ಲಾಡಳಿತ ಎಲ್ಲಾ ರೀತಿಯ ಶ್ರಮ ವಹಿಸುತ್ತಿದ್ದು, ಜಿಲ್ಲೆಯಲ್ಲಿ ಲಾಕ್ಡೌನ್ ಬಿಗಿಗೊಳಿಸಿ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.
![ಶಿವಮೊಗ್ಗದಲ್ಲಿ ಬಿಗಿಗೊಂಡ ಲಾಕ್ಡೌನ್: ಚೆಕ್ ಪೋಸ್ಟ್ಗಳಲ್ಲಿ ಹೈ ಅಲರ್ಟ್ High alert on shimoga check posts](https://etvbharatimages.akamaized.net/etvbharat/prod-images/768-512-6813988-66-6813988-1587028515449.jpg)
ಜಿಲ್ಲೆಗೆ ಸಂಪರ್ಕ ಹೊಂದುವ ದಾವಣಗೆರೆ, ಚಿಕ್ಕಮಗಳೂರು, ಉಡುಪಿ, ಹೊನ್ನಾವರ, ಹಾವೇರಿ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿಯೊಂದು ಚೆಕ್ ಪೋಸ್ಟ್ಗಳಲ್ಲೂ ಪೊಲೀಸರ ಜೊತೆ ಆರೋಗ್ಯ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಮುಖ್ಯವಾಗಿ ಜಿಲ್ಲೆಗೆ ದಾವಣಗೆರೆಯ ಚನ್ನಗಿರಿ ಹಾಗೂ ಹಾವೇರಿಯ ಹಿರೇಕೆರೂರು ಭಾಗದಿಂದ ಹೆಚ್ಚಿನ ಜನ ಆರೋಗ್ಯ ತಪಾಸಣೆಗೆಂದು ಆಗಮಿಸುತ್ತಾರೆ. ಹೀಗೆ ಬರುವ ಎಲ್ಲಾ ಜನರನ್ನು ವಿಚಾರಣೆ ನಡೆಸಿ ಅವರ ಬಳಿ ವೈದ್ಯರ ಅಪಾಯಿಂಟ್ಮೆಂಟ್ ಲೆಟರ್ ಅಥವಾ ಚಿಕಿತ್ಸೆಗೆ ಸಂಬಂಧಿಸಿದ ಯಾವುದಾದರೂ ದಾಖಲೆಗಳಿದ್ದರೆ ಮಾತ್ರ ಒಳ ಬಿಡಲಾಗುತ್ತಿದೆ.