ಶಿವಮೊಗ್ಗ :ಕೊರೊನಾ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ ಮಾಡಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಿ ಆದೇಶಿದೆ.
ಹಾಗಾಗಿ, ಶಿವಮೊಗ್ಗ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಸರಿಯಾದ ವ್ಯಾಪಾರವಿಲ್ಲದೇ ರಾಶಿ ರಾಶಿ ತರಕಾರಿ ಕೊಳೆತು ಹಾಳಾಗಿದೆ.
ಶಿವಮೊಗ್ಗದಲ್ಲಿ ಮಾರಾಟವಾಗದ ರಾಶಿ ರಾಶಿ ತರಕಾರಿ ರಸ್ತೆ ಪಾಲು.. ಓದಿ: ಸಿಇಟಿ ಪರೀಕ್ಷೆ ಮುಂದೂಡಿಕೆ, ದಿನಾಂಕ ಮರು ನಿಗದಿ
ತರಕಾರಿ ಖರೀದಿಗೆ ಕೇವಲ ನಾಲ್ಕು ಗಂಟೆಗಳ ಕಾಲ ಅವಕಾಶ ನೀಡಿದ್ದು ಹಾಗೂ ಸಗಟು ಮಾರುಕಟ್ಟೆಯಿಂದ ಬೇರೆ ಜಿಲ್ಲೆಗಳಿಗೆ ತರಕಾರಿಗಳು ಸರಬರಾಜು ಆಗದೇ ಇರುವ ಕಾರಣ ಶಿವಮೊಗ್ಗ ಸಗಟು ಮಾರುಕಟ್ಟೆಯಲ್ಲಿ ರಾಶಿ ರಾಶಿ ತರಕಾರಿಗಳು ಹಾಳಾಗಿವೆ.
ಕೊರೊನಾ ಹೆಚ್ಚಾಗುತ್ತಿರುವುದರಿಂದ ಸರಿಯಾಗಿ ವ್ಯಾಪಾರವು ಆಗದೇ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ್.
ಶಿವಮೊಗ್ಗದಲ್ಲಿ ಮಾರಾಟವಾಗದ ರಾಶಿ-ರಾಶಿ ತರಕಾರಿ ರಸ್ತೆ ಪಾಲು