ಶಿವಮೊಗ್ಗ: ಜಿಲ್ಲೆಯು ಗ್ರೀನ್ ಜೋನ್ ನಲ್ಲಿದೆ. ಇದರಿಂದ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಲಾಕ್ ಡೌನ್ ನಿಯಮಗಳಲ್ಲಿ ಕೆಲ ಸಡಿಲಿಕೆ ಮಾಡಿದೆ. ಅದರಂತೆ ಜೀವನಾವಶ್ಯಕ ವಸ್ತುಗಳ ಜೊತೆಗೆ ಕೃಷಿ, ಕಬ್ಬಿಣ, ಎಲೆಕ್ಟ್ರಾನಿಕ್ ವಸ್ತುಗಳ ಅಂಗಡಿ ತೆರೆಯಲು ಅವಕಾಶ ಮಾಡಿ ಕೊಟ್ಟಿದೆ. ಇದರಿಂದ ಜನ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಅಂಗಡಿಗಳ ಮುಂದೆ ನಿಂತಿದ್ದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಉಪಕರಣಗಳ ಅಂಗಡಿ, ನೀರಾವರಿ ಉಪಕರಣಗಳು, ಗೊಬ್ಬರ ಸೇರಿದಂತೆ ಕೃಷಿ ಸಂಬಂಧಿತ ಅಂಗಡಿಗಳು ತೆರೆಯಲಾಗಿದೆ. ಜೊತೆಗೆ ಪೈಪ್ ಅಂಗಡಿಗಳು, ಎಲೆಕ್ಟ್ರಾನಿಕ್ ಅಂಗಡಿ, ದೊಡ್ಡ ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ. ಈ ಅಂಗಡಿಗಳನ್ನು ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೂ ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ. ಅಂಗಡಿಗಳು ತೆರೆದ ಕಾರಣ ಗ್ರಾಮೀಣ ಭಾಗದವರು ಹಾಗೂ ನಗರ ಭಾಗದ ಜನ ಅಂಗಡಿಗಳತ್ತ ದೌಡಾಯಿಸಿದ್ದರು.