ಕರ್ನಾಟಕ

karnataka

ETV Bharat / state

ನಮ್ಮ ನೋವು ಆಲಿಸಿ: ಸರ್ಕಾರಕ್ಕೆ ಶಿವಮೊಗ್ಗ ಆಟೋ ಚಾಲಕರ ಮನವಿ - ಕೊರೊನಾ ಲಾಕ್​ಡೌನ್​

ಲಾಕ್​ಡೌನ್ ಜಾರಿಯಾದ ಬಳಿಕ ಆಟೋ, ಟ್ಯಾಕ್ಸಿ ಸೇರಿದಂತೆ ಇತರೆ ವಾಹನ ಚಾಕಲರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿನಿತ್ಯ ರಸ್ತೆಯಲ್ಲಿ ವಾಹನ ಚಲಾಯಿಸಿದರಷ್ಟೇ ದುಡಿಮೆ ಎನ್ನುತ್ತಿದ್ದ ಚಾಲಕರು ಇಂದು ಮನೆಯಲ್ಲಿಯೇ ಕುಳಿತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

Listen our pain: Shimoga Auto drivers appeal to government
ನಮ್ಮ ನೋವು ಆಲಿಸಿ: ಸರ್ಕಾರಕ್ಕೆ ಶಿವಮೊಗ್ಗ ಆಟೋ ಚಾಲಕರ ಮನವಿ

By

Published : Apr 23, 2020, 10:26 PM IST

ಶಿವಮೊಗ್ಗ:ಕೋವಿಡ್-19 ಹಿನ್ನೆಲೆ ಲಾಕ್​​ಡೌನ್​ನಿಂದಾಗಿ ಆಟೋ ಚಾಲಕರ ಜೀವನ ಸಂಕಷ್ಟಕ್ಕೀಡಾಗಿದೆ. ಲಾಕ್​​ಡೌನ್​ನಿಂದ ಜನರು ಮನೆಯಿಂದ ಹೊರ ಬರುತ್ತಿಲ್ಲ. ಅಲ್ಲದೆ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಹಿನ್ನೆಲೆ ಆಟೋ‌ ಚಾಲಕರಿಗೆ ದುಡಿಮೆಯೇ ಇಲ್ಲದಂತಾಗಿದೆ. ಇದರಿಂದ ಪ್ರತಿದಿನ ಜೀವನ ನಡೆಸುವುದು ಸಂಕಷ್ಟವಾಗಿದೆ. ಆಟೋ ಚಾಲಕರು, ಅವರ ದುಡಿಮೆಯನ್ನೇ ನಂಬಿರುವ ಕುಟುಂಬಸ್ಥರು, ಮನೆ ಬಾಡಿಗೆ, ಔಷಧಗಳನ್ನು ತರಲು ಕಷ್ಟವಾಗಿದೆ.

ನಮ್ಮ ನೋವು ಆಲಿಸಿ: ಸರ್ಕಾರಕ್ಕೆ ಶಿವಮೊಗ್ಗ ಆಟೋ ಚಾಲಕರ ಮನವಿ

ಇದರಿಂದ ತಕ್ಷಣ ರಾಜ್ಯ ಸರ್ಕಾರ ಆಟೋ‌ ಚಾಲಕರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಾಹನ ಚಾಲಕರ ಹಿತ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು.

ರಾಜ್ಯ ಸರ್ಕಾರ, ಆಂಧ್ರ ಹಾಗೂ ದೆಹಲಿ ಸರ್ಕಾರಗಳಂತೆ ಆಟೋ ಚಾಲಕರಿಗೆ ಧನಸಹಾಯ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು. ಈ ವೇಳೆ ವಾಹನ ಚಾಲಕರ ಹಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಲ್ಲಾಭಕ್ಷ್, ಸಂತೋಷ್, ನಾಗೇಶ್, ನಾಯಾಬ್ ಸೇರಿ ಇತರರು ಇದ್ದರು.

ABOUT THE AUTHOR

...view details