ಕರ್ನಾಟಕ

karnataka

ETV Bharat / state

ಭರ್ತಿಯಾಗುತ್ತಿದೆ ಲಿಂಗನಮಕ್ಕಿ, ನದಿ ಪಾತ್ರದ ಜನರಿಗೆ ಕೆಪಿಸಿ ಎಚ್ಚರಿಕೆ - ಜನರಿಗೆ ಕೆಪಿಸಿ ಎಚ್ಚರಿಕೆ

ಜಲಾಶಯದ ಹಿನ್ನೀರಿನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ನೀರನ್ನು ಯಾವ ಸಮಯದಲ್ಲಾದ್ರೂ ಹೊರ ಬಿಡಬಹುದು. ಹಾಗಾಗಿ ಕರ್ನಾಟಕ‌ ಪವರ್ ಕಾರ್ಪೋರೇಷನ್ ನದಿ ಪಾತ್ರದ ಜನತೆಗೆ ಎಚ್ಚರಿಕೆ ನೀಡುತ್ತಿದೆ.

KPC warning
ಶಿವಮೊಗ್ಗ

By

Published : Oct 15, 2020, 4:42 PM IST

ಶಿವಮೊಗ್ಗ: ರಾಜ್ಯಕ್ಕೆ ಬೆಳಕು ನೀಡುವ ಲಿಂಗನಮಕ್ಕಿ ಜಲಾಶಯ ಭರ್ತಿಯಾಗಲು ಇನ್ನೇನು 5 ಅಡಿ‌ ನೀರು ಬೇಕು. ಜಲಾಶಯ ಭರ್ತಿ ಆದರೆ ನೀರನ್ನು ಹೊರ ಬಿಡಲಾಗುತ್ತದೆ. ಹಾಗಾಗಿ ಕೆಪಿಸಿಯು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡುತ್ತಿದೆ.

ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡುತ್ತಿರುವ ಕೆಪಿಸಿ

ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಸತತ ನಾಲ್ಕು ದಿನಗಳಿಂದ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು‌ ಹರಿದು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1,819 ಅಡಿ ಆಗಿದ್ದು, ಸದ್ಯ ನೀರಿನ ಮಟ್ಟ 1,815.95 ತಲುಪಿದೆ.

ಜಲಾಶಯದ ಹಿನ್ನೀರಿನ ಪ್ರದೇಶವಾದ ಹೊಸನಗರ ತಾಲೂಕಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ನೀರನ್ನು ಯಾವ ಸಮಯದಲ್ಲಾದ್ರೂ‌ ಹೊರಕ್ಕೆ ಬಿಡಬಹುದು. ಕೆಪಿಸಿಯು ತಮ್ಮ ಇಲಾಖೆಯ ಜೀಪ್​ಗೆ ಮೈಕ್ ಕಟ್ಟಿ ನದಿ ಪಾತ್ರದ ಗ್ರಾಮಗಳಲ್ಲಿ‌ ಯಾರೂ ಸಹ ನದಿಗೆ ಇಳಿಯುವುದು,‌ ಜಾನುವಾರುಗಳನ್ನು ಮೇಯಿಸಲು ಕಳುಹಿಸಬಾರದು ಎಂದು ಜನರಿಗೆ ತಿಳಿಸುತ್ತಿದೆ. ಲಿಂಗನಮಕ್ಕಿ‌ ಜಲಾಶಯ ಕಳೆದ ವರ್ಷವೂ ಸಹ ಭರ್ತಿಯಾಗಿತ್ತು.

ABOUT THE AUTHOR

...view details