ಕರ್ನಾಟಕ

karnataka

ETV Bharat / state

ವಿದ್ಯುತ್​​ ಶಾಕ್​ ತಗುಲಿ ಚಿಕಿತ್ಸೆ ಪಡೆಯುತ್ತಿದ್ದ ಲೈನ್​ಮ್ಯಾನ್​ ಸಾವು - ಶಿವಮೊಗ್ಗದಲ್ಲಿ ಲೈನ್​ಮ್ಯಾನ್​ ಸಾವು

ಲೈನ್​ ದುರಸ್ತಿ ಸಂದರ್ಭದಲ್ಲಿ ಶಾಕ್​ ತಗುಲಿ ತೀವ್ರ ಗಾಯಗೊಂಡಿದ್ದ ಲೈನ್​ಮ್ಯಾನ್​ ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

lineman dead
ಲೈನ್​ಮ್ಯಾನ್​ ಸಾವು

By

Published : Oct 14, 2020, 2:23 PM IST

ಶಿವಮೊಗ್ಗ:ನಾಲ್ಕು ದಿನಗಳ ಹಿಂದೆ ಕಂಬ ಹತ್ತಿ ವಿದ್ಯುತ್​ ಲೈನ್​ ಸರಿಪಡಿಸುವಾಗ ಶಾಕ್​ ಹೊಡೆದ ಪರಿಣಾಮ ಚಿಕಿತ್ಸೆ ಪಡೆಯುತ್ತಿದ್ದ ಲೈನ್​ಮ್ಯಾನ್ ಇಂದು ಮೃತಪಟ್ಟಿದ್ದಾರೆ. ಉಮಾ ಶಂಕರ್ ಮೃತ ಲೈನ್​ಮ್ಯಾನ್.

ಲೈನ್​ ದುರಸ್ತಿ ಸಂದರ್ಭದಲ್ಲಿ ಶಾಕ್​ ತಗುಲಿದೆ. ಈ ವೇಳೆ ಕಂಬದ ಮೇಲೆ ಕೆಲ ಹೊತ್ತು ಸಿಲುಕಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಕೆಪಿಟಿಸಿಎಲ್​​​ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಪವರ್​ ಮ್ಯಾನ್​​​​​ ಉಮಾ ಶಂಕರ್​ ಅವರನ್ನು ಕೆಳಗಿಳಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು.

ಮೃತ ಲೈನ್​ಮ್ಯಾನ್ ಉಮಾ ಶಂಕರ್

ನಂತರ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ABOUT THE AUTHOR

...view details