ಕರ್ನಾಟಕ

karnataka

ETV Bharat / state

ಕೊರೊನಾದಿಂದ ಆರ್ಕೇಸ್ಟ್ರಾ ಕಲಾವಿದರ ಬದುಕು ಬೀದಿಗೆ: ಸಹಾಯಕ್ಕೆ ಬರುವಂತೆ ಸರ್ಕಾರಕ್ಕೆ ಮನವಿ - ಶಿವಮೊಗ್ಗದಲ್ಲಿ ಕೊರೊನಾ ಪ್ರಕರಣಗಳು

ಕೊರೊನಾದಿಂದ ಜನರ ಬದುಕು ಬೀದಿಗೆ ಬಿದ್ದಿದೆ. ಕಲಾ ಸೇವೆಯನ್ನು ನಂಬಿಕೊಂಡಿದ್ದ ಅನೇಕ ಕಲಾವಿದರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಇದಕ್ಕೆ ಆರ್ಕೇಸ್ಟ್ರಾ ಕಲಾವಿದರ ಬದುಕು ಹೊರತಾಗಿಲ್ಲ.

dsd
ಕೊರೊನಾದಿಂದ ಆರ್ಕೇಸ್ಟ್ರಾ ಕಲಾವಿದರ ಬದುಕು ದುಸ್ತ

By

Published : May 26, 2020, 2:21 PM IST

ಶಿವಮೊಗ್ಗ: ಕೊರೊನಾದಿಂದ ಕಲಾವಿದರ ಬದುಕು ಕಷ್ಟಕರವಾಗಿದೆ. ನಮ್ಮ ನೆರವಿಗೂ ಸರ್ಕಾರ ಬರಲಿ ಎಂದು ಆರ್ಕೇಸ್ಟ್ರಾ ಕಲಾವಿದರು ಮನವಿ ಮಾಡಿದ್ದಾರೆ.

ಕೊರೊನಾದಿಂದ ಆರ್ಕೇಸ್ಟ್ರಾ ಕಲಾವಿದರ ಬದುಕು ದುಸ್ತರ

ಸಭೆ ಸಮಾರಂಭ, ಮದುವೆ, ಜಾತ್ರೆ, ಅದ್ದೂರಿ ಮೆರವಣಿಗೆಯೇ ಇರಲಿ ಎಲ್ಲಾ ಕಡೆಯಲ್ಲಿ ಬಂದು ರಂಜಿಸುವ ವಾದ್ಯಗೋಷ್ಠಿ ಕಲಾವಿದರ ಬದುಕು ಈಗ ಬೀದಿಗೆ ಬಿದ್ದಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಆರ್ಕೇಸ್ಟ್ರಾಗಳನ್ನು ಹೊಂದಿರುವ ಭದ್ರಾವತಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.

300ಕ್ಕೂ ಹೆಚ್ಚು ಕುಟುಂಬಗಳು ಈ ಆರ್ಕೇಸ್ಟ್ರಾಗಳನ್ನು ನಂಬಿಕೊಂಡು ಬದುಕು ಸಾಗಿಸುತ್ತಿದ್ದವು. ಆದರೆ ಕೊರೊನಾ ಮಹಾಮಾರಿಯಿಂದಾಗಿ ಯಾವುದೇ ಕಾರ್ಯಕ್ರಮಗಳು ಸಭೆ,ಸಮಾರಂಭಗಳು ನಡೆಯುತ್ತಿಲ್ಲ. ಹಾಗಾಗಿ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಮ್ಮಂತ ಕಲಾವಿದರನ್ನು ಕಲಾವಿದರಾಗಿ ಪರಿಗಣಿಸಿ ಸಹಾಯ ಮಾಡಬೇಕು ಎಂದು ವಾದ್ಯಗೋಷ್ಠಿ ಕಲಾವಿದರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details