ಶಿವಮೊಗ್ಗ:ಜಿಲ್ಲೆಯಲ್ಲಿರುವಸೊರಬದ ಮುಖ್ಯ ರಸ್ತೆಯನ್ನು ಪಟ್ಟಣ ಪಂಚಾಯಿತಿ ಕಂಟೇನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿದೆ. ಈ ಪ್ರದೇಶದಲ್ಲಿ ಮನೆಯಲ್ಲಿ ಬಾಡಿಗೆಯಿದ್ದ ಆಂಧ್ರ ಮೂಲದ ವಿದ್ಯುತ್ ಗುತ್ತಿಗೆದಾರನ ಕುಟುಂಬದ ಮೂವರಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆಂಧ್ರ ಮೂಲದ ಗುತ್ತಿಗೆದಾರ ಕುಟುಂಬದ ಮೂವರಿಗೆ ಸೋಂಕು: ಸೊರಬ ಮುಖ್ಯರಸ್ತೆ ಬಂದ್
ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದ ಕಾರಣಕ್ಕೆ ಶಿವಮೊಗ್ಗ ಸೊರಬದ ಮುಖ್ಯ ರಸ್ತೆಯನ್ನು ಕಂಟೇನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ.
ಕೊರೊನಾ ದೃಢಪಟ್ಟ ಎಲ್ಲರನ್ನೂ ಆ್ಯಂಬುಲೆನ್ಸ್ನಲ್ಲಿ ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ರವಾನೆ ಮಾಡುವಾಗ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಜರಿದ್ದು, ಅಲ್ಲಿನ ವ್ಯವಸ್ಥೆ ಗಮನಿಸಬೇಕು.
ಆದರೆ, ನಿನ್ನೆ ರಾತ್ರಿ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಹೋದರೂ ಸೊರಬ ಸಿಪಿಐ ಹಾಗೂ ಪಿಎಸ್ಐ ಅವರು ತಾವೇ ಬ್ಯಾರಿಕೇಡ್ ರಸ್ತೆಗಿಟ್ಟು, ಕೊರೊನಾ ಪೀಡಿತರನ್ನು ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದ್ದಾರೆ. ಇದಕ್ಕೆ ಸ್ಥಳೀಯರು ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.