ಶಿವಮೊಗ್ಗ: ಖದೀಮನೊಬ್ಬ ಬೆಳ್ಳಂಬೆಳಗ್ಗೆ ಕಟ್ಟಡದ 3ನೇ ಮಹಡಿಗೆ ತೆರಳಿ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳನ್ನು ಎಗರಿಸಿಕೊಂಡು ಹೋಗಿರುವ ಘಟನೆ ಇಲ್ಲಿನ ರವೀಂದ್ರನಗರದ 6ನೇ ಕ್ರಾಸ್ನಲ್ಲಿ ನಡೆದಿದ್ದು ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗ್ಗೆ 7.30ರ ಹೊತ್ತಿಗೆ ನೇರವಾಗಿ ಕಟ್ಟಡದೊಳಗೆ ಗುಗ್ಗಿದ ಖದೀಮ, ತನ್ನ ಕೈಚಳಕ ತೋರಿಸಿದ್ದಾನೆ.
ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾದ ಖದೀಮ ಏನೇನೆಲ್ಲ ಕದ್ದೊಯ್ದಿದ್ದಾನೆ?
ಕಟ್ಟಡದ 3ನೇ ಮಹಡಿಯ ಕೊಠಡಿಯಲ್ಲಿ ಅರುಣ್ ಕುಮಾರ್ ಎಂಬುವವರಿಗೆ ಸೇರಿದ ಒಂದು ಡೆಲ್ ಲ್ಯಾಪ್ಟಾಪ್, ಅವರ ಸ್ನೇಹಿತ ಜಗದೀಶ್ ಎಂಬುವವರಿಗೆ ಸೇರಿದ ಎರಡು ಮೊಬೈಲ್, ಶಿವರಾಜ್ ನಾಯ್ಕ ಎಂಬುವವರಿಗೆ ಸೇರಿದ ಒಂದು ಮೊಬೈಲ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಇವುಗಳ ಒಟ್ಟು ಮೌಲ್ಯ 77 ಸಾವಿರ ಎಂದು ಹೇಳಲಾಗುತ್ತಿದೆ.
ಪಿ.ಹೆಚ್.ಡಿ ದಾಖಲೆಗಳು ಮಾಯ!
ಕಳವಾಗಿರುವ ಲ್ಯಾಪ್ಟಾಪ್ನಲ್ಲಿ ಅರುಣ್ ಕುಮಾರ್ ಅವರಿಗೆ ಸಂಬಂಧಿಸಿದ ಪಿಹೆಚ್ಡಿ. ದಾಖಲೆಗಳಿದ್ದವು ಎಂದು ತಿಳಿದು ಬಂದಿದೆ. ಪಿಹೆಚ್ಡಿ ಸಂಶೋಧನೆ ಅಂತಿಮ ಹಂತಕ್ಕೆ ಬಂದಿದ್ದು, ಸಂಪೂರ್ಣ ದಾಖಲೆಗಳು ಲ್ಯಾಪ್ಟಾಪ್ನಲ್ಲಿದ್ದವು. ಕಳ್ಳ ಅದನ್ನೇ ಕದ್ದೊಯ್ದಿದ್ದಾನೆ.
ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾದ ಖದೀಮ ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳನ ಕೈಚಳಕ!
ನೀಲಿ ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ಲ್ಯಾಪ್ಟಾಪ್ ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಮೀಪದ ಕಟ್ಟಡವೊಂದರಲ್ಲಿ ಇದ್ದ ಸಿಸಿಟಿವಿಯಲ್ಲಿ ಖದೀಮನು ಲ್ಯಾಪ್ಟಾಪ್ ಬ್ಯಾಗ್ ಹಾಕಿಕೊಂಡು ಹೋಗುತ್ತಿರುವುದು ಸೆರೆಯಾಗಿದ್ದು, ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.