ಶಿವಮೊಗ್ಗ: ಜಾತಕದಲ್ಲಿ ಕುಜ ದೋಷವಿದೆಯೆಂದು ಪ್ರೀತಿಸಿದವನು ಮದುವೆಗೆ ನಿರಾಕರಿಸಿದ ಕಾರಣ ವಿಷ ಸೇವಿಸಿದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಸುಧಾ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಸುಧಾ ಮತ್ತು ಅರಣ್ಯ ಇಲಾಖೆಯಲ್ಲಿ ಆರ್ಎಫ್ಒ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ್ ಮೊಕಾಶಿ ಪರಸ್ಪರ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರವೀಣ್ ಅವರು ಸುಧಾ ಅವರ ಜಾತಕವನ್ನು ತನ್ನ ತಾಯಿಗೆ ತೋರಿಸಿದ್ದಾರೆ. ಜಾತಕದಲ್ಲಿ ಕುಜ ದೋಷವಿರುವ ಕಾರಣ ಪ್ರವೀಣ್ ತಾಯಿ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಪ್ರವೀಣ್ ಸುಧಾಳನ್ನು ದೂರ ಮಾಡುತ್ತಿದ್ದ. ಆದರೆ, ಸುಧಾ ನಾವಿಬ್ಬರು ಅದಷ್ಟು ಬೇಗ ಮದುವೆಯಾಗೋಣ ಎಂದು ಪ್ರವೀಣ್ರಲ್ಲಿ ಒತ್ತಾಯ ಮಾಡುತ್ತಿದ್ದರು. ಮೇ. 31ರಂದು ಭದ್ರಾವತಿಯ ಜೋಳದಾಳ್ ಬಳಿ ಕರ್ತವ್ಯದಲ್ಲಿದ್ದ ಪ್ರವೀಣ್ನ ಬಳಿ ಹೋದ ಸುಧಾ ಮದುವೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಪ್ರವೀಣ್ ಒಪ್ಪಿಗೆ ಸೂಚಿಸಿರಲಿಲ್ಲ.