ಕರ್ನಾಟಕ

karnataka

ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎದ್ದುಕಾಣುತ್ತಿದೆ: ಆಯನೂರು ಮಂಜುನಾಥ್

By ETV Bharat Karnataka Team

Published : Oct 14, 2023, 6:47 PM IST

ಬಿಜೆಪಿಯಲ್ಲಿ ಕೇಳುವವರು ಹೇಳುವವರು ಇಲ್ಲ. ಬಿಜೆಪಿಯಲ್ಲಿ ಅನಾಯಕತ್ವ ಕೊರತೆಯಿಂದ ಈವರೆಗೂ ವಿಧಾನಸಭೆ ಪರಿಷತ್​ನಲ್ಲಿ ತನ್ನ ವಿರೋಧ ಪಕ್ಷದ ಸ್ಥಾನಕ್ಕೆ ನಾಯಕರನ್ನು ಆಯ್ಕೆ ಮಾಡಲು ಆಗಿಲ್ಲವೆಂದು ಆಯನೂರು ಮಂಜುನಾಥ್ ಆರೋಪಿಸಿದರು.

Ayanur Manjunath spoke at the press conference.
ಕಾಂಗ್ರೆಸ್​ ವಕ್ತಾರ ಆಯನೂರು ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಮೊಗ್ಗ:ರಾಜ್ಯ ಬಿಜೆಪಿಯಲ್ಲಿ ಅನಾಯಕತ್ವ ಇದೆ. ಅದನ್ನು ಮೊದಲು ಬಿಜೆಪಿ ನಾಯಕರು ಸರಿಪಡಿಸಿಕೊಂಡ ನಂತರ ಕಾಂಗ್ರೆಸ್ ಬಗ್ಗೆ ಮಾತನಾಡಲಿ ಎಂದು ಕಾಂಗ್ರೆಸ್​ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್​​ ಅವರು ನನ್ನನ್ನು ಪಕ್ಷದ ವಕ್ತಾರರನ್ನಾಗಿ ಮಾಡಿದ್ದಾರೆ. ಅವರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಮೊನ್ನೆ ದಿವಸ ಸದಾನಂದ ಗೌಡರು ನೀಡಿದ ಸಂದರ್ಶನದಲ್ಲಿ ಬಿಜೆಪಿ ಅಸಹಾಯಕತೆಯನ್ನು ಹೊರ ಹಾಕಿದ್ದಾರೆ. ಬಿಜೆಪಿ ಪಕ್ಷದಲ್ಲಿ ಕೇಳುವವರು ಹೇಳುವವರು ಇಲ್ಲ. ವರಿಷ್ಠರಿಗೆ ನೇರ ಮಾತನಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಚುನಾವಣೆ ಆಗಿ ಐದು ತಿಂಗಳಾಗಿದೆ. ವಿಧಾನಸಭೆ ಹಾಗೂ ಪರಿಷತ್ ನಲ್ಲಿ ತನ್ನ ಸಂವಿಧಾನಿಕವಾದ ಹುದ್ದೆ ವಿರೋಧ ಪಕ್ಷದ ಸ್ಥಾನಕ್ಕೆ ನೇಮಿಸಿಲ್ಲ. ಇದರಿಂದ ವಿಪ್ ಜಾರಿಗೂ ಅವಕಾಶವಿಲ್ಲದಂತೆ ಇದೆ ಎಂದು ಹೇಳಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನವಿತ್ತು. ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಇದನ್ನು ಸರಿಪಡಿಸಿದರೆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳುತ್ತ ಭ್ರಮೆಯಲ್ಲಿ ಬಿಜೆಪಿಯವರು ತೇಲುತ್ತಿದ್ದಾರೆ. ಯಡಿಯೂರಪ್ಪರಂತಹ ದಿಟ್ಟ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಟೀಕಿಸಿದರು.

ಈಶ್ವರಪ್ಪ ವಿರುದ್ಧ ವಾಗ್ದಾಳಿ: ನೀರಾವರಿ ಕುರಿತು ನಮ್ಮ ವಿರುದ್ಧದ ತೀರ್ಪು ಬರ್ತಾ ಇದೆ. ನಮ್ಮ ಜಿಲ್ಲೆಯ ಮಾಜಿ ನೀರಾವರಿ ಸಚಿವರು ಎಂದಿಗೂ ಈ ಬಗ್ಗೆ ಮಾತನಾಡಿಲ್ಲ. ಹಿಂದೆ ಎಸ್ ಎಂ ಕೃಷ್ಣ ಸಿಎಂ ಆದಾಗ ಬರ ಇದ್ದಾಗ, ವಾಜಪೇಯಿ ಅವರು ಮಧ್ಯ ಪ್ರವೇಶ ಮಾಡಿದ್ದರು. ಅಂದು ಅನಂತಕುಮಾರ್ ಮುತುವರ್ಜಿ ವಹಿಸಿದ್ದರು. ಸಂಸದರು ಪ್ರಧಾನಮಂತ್ರಿ ಬಳಿ ಹೋಗಿ ಮಧ್ಯ ಪ್ರವೇಶಿಸಿ ಎಂದಿಗೂ ಹೇಳಿಲ್ಲ. ಸಣ್ಣ ಪ್ರಮಾಣದ ಗಲಾಟೆ ಕುರಿತು ಮಾತ್ರ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ರಾಗಿಗುಡ್ಡ ಗಲಾಟೆಯನ್ನು ಖಂಡಿಸುವೆ. ಆದರೆ, ಹಚ್ಚಿದ ಬೆಂಕಿ ಬೇಗ ಆರಿದ ಬಗ್ಗೆ ಈಶ್ವರಪ್ಪನವರಿಗೆ ಬೇಸರವಾಗಿದೆ. ವಿರೋಧ ಪಕ್ಷದ ಕೆಲಸವನ್ನು ಬಿಜೆಪಿಯವರು ಮಾಡುತ್ತಿಲ್ಲ. ಅವರು ನಾಡಿಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯುತ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಎಂದು ಆಯನೂರು ಆರೋಪಿಸಿದರು.

ಈಶ್ವರಪ್ಪನವರಿಗೆ ಅಧಿಕಾರ ಹೋಗ್ತಾ ಇದ್ದ ಹಾಗೆ ದುಬೈನಿಂದ ಕರೆ ಬರುತ್ತದೆ. ನಿಮಗೆ ಜೀವ ಭಯ ಇದ್ರೆ ಎರಡು ಗನ್ ಮ್ಯಾನ್ ಇಟ್ಟುಕೊಂಡು ಓಡಾಡಿ, ನೀವು ಬರುವ ಬಗ್ಗೆ ಸೈರನ್ ಹಾಕಿಕೊಂಡು ಓಡಾಡಬೇಡಿ. ನೀವು ದೆಹಲಿಗೆ ಹೋಗಿ ರಾಜ್ಯದ ಹಿತ ಕಾಪಾಡಿ ಎಂದು ಅಪಹಾಸ್ಯ ಮಾಡಿದರು.

ಸಣ್ಣ ಮಟ್ಟದ ರಾಜಕಾರಣ ಬಿಟ್ಟು ರಾಜ್ಯದ ಹಿತದ ಬಗ್ಗೆ ಕೆಲಸ ಮಾಡಿ. ಕಾಂಗ್ರೆಸ್​ನಲ್ಲಿ ಏನಿದೆ ಎಂದು ತಿಳಿದುಕೊಳ್ಳುತ್ತಿದ್ದಾರೆ. ಅಂಬಿಕಾಪತಿ ಯಾರ ಪತಿ ಎಂದು ನಮಗೂ ಗೂತ್ತಿಲ್ಲ. ಅದು ತ‌ನಿಖೆಯಿಂದ ಹೊರ ಬರಬೇಕಿದೆ. ಹಣ ಎಣಿಸುವ ಮಷಿನ್ ಸಿಕ್ಕರೆ, ಇದು ಹಳೆ‌ ಮಷಿನ್ ಸಿಕ್ಕರೆ ಹೊಸದು ಹಳೆದು ತಾಳಿ ಹಾಕಿ ನೋಡಬೇಕಿದೆ. ಇವರೇ ತನಿಖಾ ಏಜೆನ್ಸಿಯಂತೆ ಮಾತನಾಡುತ್ತಿದ್ದಾರೆ. ಆದರೆ ತನಿಖೆಯಿಂದ ಹೊರ ಬರುತ್ತದೆ. ರಾಜ್ಯದ ಉಪ ಮುಖ್ಯಮಂತ್ರಿಗಳಾಗಿದ್ದವರು ಈಗ ಮಾತನಾಡದೇ ಇರುವುದು ಒಳ್ಳೆಯದು. ಪೊಲೀಸ್ ಇಲಾಖೆಯು ಸರಿಯಾದ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.

ಕಾಂಗ್ರೆಸ್​ಗೆ ತಳಕು ಹಾಕುವ ಯತ್ನ: ಸುಂದರೇಶ್ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಮಾತನಾಡಿ, ಬಿಜೆಪಿಯವರಿಗೆ ತಮ್ಮ ನಾಯಕರನ್ನು ನೇಮಕ ಮಾಡಿಕೊಳ್ಳಲು ಆಗಿಲ್ಲ. ರಾಜ್ಯದಲ್ಲಿ ಎಲ್ಲೆ ಹಣ ದೂರೆತರೂ ಸಹ ಅದನ್ನು ಕಾಂಗ್ರೆಸ್​ಗೆ ತಳಕು ಹಾಕುವ ಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ ಮೇರೆ ಮೀರಿದೆ: ಹೆಚ್​ ಡಿ ಕುಮಾರಸ್ವಾಮಿ

ABOUT THE AUTHOR

...view details