ಕರ್ನಾಟಕ

karnataka

ETV Bharat / state

ಸುಳ್ಳು ಜಾತಿ ಪ್ರಮಾಣ ಪತ್ರ....ಕುವೆಂಪು ವಿವಿ ಉಪ ಕುಲಸಚಿವೆ ಅಮಾನತು ! - latest shivamogga news

ಕುವೆಂಪು ವಿವಿಗೆ ಪ್ರಥಮ‌ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ್ದರು. ಈ ವೇಳೆ ಇವರು ತೀರ್ಥಹಳ್ಳಿ ತಹಶೀಲ್ದಾರ್ ಬಳಿ ಎಸ್​​ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಈ ಕುರಿತು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಪಿಸಿಆರ್ ಕೇಸ್ ದಾಖಲಾಗಿತ್ತು.

kuvempu vv
ಕುವೆಂಪು ವಿವಿ ಉಪ ಕುಲಸಚಿವೆ ಅಮಾನತು

By

Published : Jul 1, 2020, 7:41 PM IST

ಶಿವಮೊಗ್ಗ : ಕುವೆಂಪು ವಿಶ್ವ ವಿದ್ಯಾ‌ನಿಲಯದ ದಾಸ್ತಾನು ಮತ್ತು ಖರೀದಿ ವಿಭಾಗದ ಉಪ ಕುಲಸಚಿವರಾದ ಡಿ. ವಿ. ಗಾಯತ್ರಿಯವರನ್ನು ಸೇವೆಯಿಂದ ಅಮಾನತು ಮಾಡಿ ಕುವೆಂಪು ವಿವಿ ಕುಲಸಚಿವ ಎಸ್. ಎಸ್. ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಡಿ. ವಿ. ಗಾಯಿತ್ರಿಯವರ ಮೇಲೆ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಕೇಳಿ ಬಂದಿತ್ತು. ಇವರು ಮೊದಲು ಕುವೆಂಪು ವಿವಿಗೆ ಪ್ರಥಮ‌ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿದ್ದರು. ಈ ವೇಳೆ ಇವರು ತೀರ್ಥಹಳ್ಳಿ ತಹಶೀಲ್ದಾರ್ ಬಳಿ ಎಸ್​​ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದರು. ಈ ಕುರಿತು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಪಿಸಿಆರ್ ಕೇಸ್ ದಾಖಲಾಗಿತ್ತು.

ಕುವೆಂಪು ವಿವಿ ಉಪ ಕುಲಸಚಿವೆ ಅಮಾನತು

ಕೇಸ್ ದಾಖಲಾದಾಗ ಕೋಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು. ಇದರನ್ವಯ ವಿವಿಯ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಮಾನ್ಯ ಕುಲಪತಿಗಳ ಆದೇಶಾನುಸಾರ ಡಿ.ವಿ.ಗಾಯತ್ರಿರವರನ್ನು ಅಮಾನತು ಮಾಡಲಾಗಿದೆ.

ABOUT THE AUTHOR

...view details