ಶಿವಮೊಗ್ಗ: ರಾಜ್ಯದ ಪ್ರತಿಷ್ಟಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಕುವೆಂಪು ವಿವಿ ಸ್ನಾತಕೋತ್ತರ ಪದವಿ ಪ್ರವೇಶಾತಿಯ ಕೌನ್ಸೆಲಿಂಗ್ ಡಿ.18 ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕುವೆಂಪು ವಿಶ್ವವಿದ್ಯಾನಿಲಯದ 40ಕ್ಕೂ ಅಧಿಕ ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಡಿಸೆಂಬರ್ 18,19 ಹಾಗೂ 21 ರಂದು ಕೌನ್ಸೆಲಿಂಗ್ ನಡೆಯಲಿದೆ.
ಪ್ರವೇಶಾತಿಯು ಕುವೆಂಪು ವಿವಿಯ ಮುಖ್ಯ ಆವರಣ ಜ್ಞಾನ ಸಹ್ಯಾದ್ರಿ, ಕಡೂರು ಪಿ.ಜಿ.ಕೇಂದ್ರ ಮತ್ತು 20 ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ 33 ವಿಭಾಗಗಳ 45 ಕೋರ್ಸ್ ಗಳಿಗೆ ಪ್ರವೇಶಾತಿಯ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಸಂಪೂರ್ಣ ಪ್ರವೇಶಾತಿ ಈ ಮೂರು ದಿನಗಳಲ್ಲಿಯೇ ಮಾಡಿ ಮುಗಿಸಲು ವಿಶ್ವ ವಿದ್ಯಾನಿಲಯ ಯೋಜಿಸಿದೆ.