ಕರ್ನಾಟಕ

karnataka

ETV Bharat / state

ಲೈಂಗಿಕ ದೌರ್ಜನ್ಯಕ್ಕೊಳಗಾದವರ ಮಕ್ಕಳಿಗೆ ವಿವಿಯಲ್ಲಿ ಒಂದು ಸೀಟು ಮೀಸಲು..  ಬಿ ವಿ ವೀರಭದ್ರಪ್ಪ - ಲೈಗಿಂಕ ದೌರ್ಜನ್ಯ

ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಕುಟುಂಬದವರ ಪರವಾಗಿ ಕುವೆಂಪು ವಿಶ್ವವಿದ್ಯಾನಿಲಯ ನಿಲ್ಲುವ ನಿರ್ಧಾರ ಮಾಡಿದೆ. ಇನ್ಮುಂದೆ ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದವರ ಮಕ್ಕಳಿಗೆ ವಿವಿಯ ಎಲ್ಲಾ ವಿಭಾಗದಲ್ಲೂ ಸಹ ಒಂದು ಸೀಟು ನೀಡುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ ಎಂದು ಕುವೆಂಪು ವಿವಿಯ ಕುಲಪತಿ ಪ್ರೋ. ಬಿ ವಿ ವೀರಭದ್ರಪ್ಪ ತಿಳಿಸಿದರು.

ಬಿ.ವಿ.ವೀರಭದ್ರಪ್ಪ

By

Published : Sep 20, 2019, 9:52 AM IST

Updated : Sep 20, 2019, 2:43 PM IST

ಶಿವಮೊಗ್ಗ:ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾದವರ ಮಕ್ಕಳಿಗೆಕುವೆಂಪು ವಿಶ್ವವಿದ್ಯಾನಿಲಯದಲ್ಲಿಎಲ್ಲ ವಿಭಾಗದಲ್ಲೂ ಸಹ ಒಂದು ಸೀಟನ್ನು ನೀಡುವ ಮಹತ್ವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಬಿ ವಿ ವೀರಭದ್ರಪ್ಪ ತಿಳಿಸಿದರು.

ಕುವೆಂಪು ವಿವಿಯಲ್ಲಿ ನಡೆದ ಕೌನ್ಸಿಲ್​ ಸಭೆ..

ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಅವರು, ಲೈಂಗಿಕ ದೌರ್ಜನ್ಯಕ್ಕೊಳಗಾದವರ ಕುಟುಂಬದವರ ಪರ ನಿಲ್ಲುವ ನಿರ್ಧಾರ ಮಾಡಲಾಗಿದೆ. ಅದರ ಜೊತೆಗೆ ವಿಶ್ವವಿದ್ಯಾನಿಲಯದ ಎಲ್ಲ ಆರ್ಟ್ಸ್ ವಿಭಾಗಗಳಲ್ಲಿ ಪ್ರತಿ ವರ್ಷ ಪ್ರವೇಶ ಕಡಿಮೆ ಆಗುತ್ತಿದ್ದು, ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ಶೇಕಡಾವಾರು ಕಡಿಮೆ ಮಾಡಲು ನಿರ್ಧಾರ ಮಾಡಲಾಗಿದೆ.

ಇನ್ನು, ಹಾಲಿ ವಿವಿಯಲ್ಲಿ ಸಾಮಾನ್ಯರಿಗೆ ಶೇ.50ರಷ್ಟು ಹಾಗೂ ಎಸ್ಸಿ/ಎಸ್ಟಿಯವರಿಗೆ ಶೇ.45ರಷ್ಟು ಪ್ರವೇಶ ನೀಡಲಾಗುತ್ತಿತ್ತು. ನಿರ್ದಿಷ್ಟ ಪ್ರವೇಶಾತಿಗಳು ನಡೆಯದ ಕಾರಣ ಸಾಮಾನ್ಯ ಪ್ರವೇಶ ಶೇ.45ಕ್ಕೆ ಹಾಗೂ ಎಸ್ಸಿ/ ಎಸ್ಟಿರವರಿಗೆ ಶೇ.40 ಪ್ರವೇಶಕ್ಕೆ ಅವಕಾಶ ಮಾಡಿ ಕೊಡಲಾಗುತ್ತದೆ ಎಂದು ತಿಳಿಸಿದರು.

Last Updated : Sep 20, 2019, 2:43 PM IST

ABOUT THE AUTHOR

...view details