ಕರ್ನಾಟಕ

karnataka

ETV Bharat / state

ಕುಂತಿಗೆ ಪುತ್ರ ಜನನ : ಸಕ್ರೆಬೈಲಿನಲ್ಲಿ ಸಂತಸದ ಸಂಭ್ರಮ - ಸಕ್ರೆಬೈಲ್ ಆನೆ ಬಿಡಾರ

ಸಕ್ರೆಬೈಲಿನ ಬಿಡಾರದ ಕುಂತಿ ಎಂಬ ಹೆಣ್ಣಾನೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.ಸಕ್ರೆಬೈಲ್ ಆನೆ ಬಿಡಾರದಲ್ಲಿ ಸಂತಸ ಮನೆ ಮಾಡಿದೆ.

Kunti elephant born son
ಕುಂತಿ ಆನೆಗೆ ಪುತ್ರ ಜನನ

By

Published : Dec 15, 2022, 7:39 PM IST

ಶಿವಮೊಗ್ಗ: ಸಕ್ರೆಬೈಲಿನ ಬಿಡಾರದ ಕುಂತಿ ಎಂಬ ಹೆಣ್ಣಾನೆ ಗಂಡು ಆನೆ ಮರಿಗೆ ಜನ್ಮ ನೀಡಿದೆ. ಕುಂತಿ ತನ್ನ ಪುತ್ರನಿಗೆ ಗುರುವಾರ ಬೆಳಗ್ಗೆ ಜನ್ಮ ನೀಡಿದಳು. ಕುಂತಿ ಆನೆಯು ಹಾಸನ ಜಿಲ್ಲೆಯಲ್ಲಿ ತನ್ನ ಮರಿಯಾನೆ ಜತೆ ಸೆರೆಯಾಗಿತ್ತು. ಅರ್ಜುನ್(11), ಹೇಮಾವತಿ(8),ಧನುಷ್(4) ಹಾಗೂ ಈಗ ಜನ್ಮ ನೀಡಿದ ಮರಿ ಸೇರಿ ನಾಲ್ವರಿಗೆ ಕುಂತಿ ಜನ್ಮ ನೀಡಿದ್ದಾಳೆ.‌

ಉತ್ತರ ಪ್ರದೇಶಕ್ಕೆ ಸಕ್ರೆಬೈಲ್ ಆನೆಗಳು:ಈಗಾಗಲೇ ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಆನೆಗಳನ್ನು ರವಾನೆ ಮಾಡಲಾಗುತ್ತಿದೆ. ಮೊದಲ ಹಂತವಾಗಿ ಮೂರು ಆನೆಗಳನ್ನು ಕಳುಹಿಸಲಾಗಿದೆ. ಈಗ ಮತ್ತೆ ನಾಲ್ಕು ಆನೆಗಳು ಹೊರಡುವ ಸೂಚನೆ ಸಿಕ್ಕಿದೆ. ಇದು ಬಿಡಾರದ ಸಿಬ್ಬಂದಿಗೆ ಬೇಸರವನ್ನುಂಟು ಮಾಡಿದೆ.

ಕುಂತಿ ಪುತ್ರನಿಗೆ ಡಿಸಿಎಫ್ ಅಧಿಕಾರಿ ಹೆಸರು:ಈಗ ಕುಂತಿ ಪುತ್ರನಿಗೆ ಜನ್ಮ ನೀಡಿದ್ದು, ಸ್ವಲ್ಪ ಮಟ್ಟಿಗೆ ಬೇಸರದ ಮೋಡ ಸರಿದಂತೆ ಆಗಿದೆ. ಅಂದ ಹಾಗೆ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಐ.ಎಂ.ನಾಗರಾಜ್ ಅವರು ನಿವೃತ್ತರಾಗುತ್ತಿದ್ದು, ಕುಂತಿ ಮರಿಯಾನೆಗೆ ನಾಗರಾಜ್ ಎಂದು ನಾಮಕರಣ ಮಾಡುವ ಸಾಧ್ಯತೆಗಳಿವೆ.

ಇದನ್ನೂಓದಿ:ಅಭಿಮಾನಿ ಮನೆಗೆ ಭೇಟಿ ನೀಡಿದ ಶಿವಣ್ಣ..

ABOUT THE AUTHOR

...view details