ಶಿವಮೊಗ್ಗ:ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಠಾಣೆಯ ಸಿಬ್ಬಂದಿಯಲ್ಲಾ ಸೇರಿ ಮಹಿಳಾ ಪೇದೆಗೆ ಸೀಮಂತ ಮಾಡಿದರು.
ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಸೀಮಂತ... ದಂಪತಿ ಫುಲ್ ಖುಷ್ - ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ
ಕುಂಸಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಗೆ ಸೀಮಂತ ಕಾರ್ಯವನ್ನು ಮಾಡಲಾಯಿತು. ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ಹಾಗೂ ಸಿಬ್ಬಂದಿ ಈ ಸೀಮಂತ ಕಾರ್ಯವನ್ನು ನಡೆಸಿಕೊಟ್ಟರು.
ಠಾಣೆಯಲ್ಲೆ ಮಹಿಳೆಗೆ ಸೀಮಂತ
ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಕವಿತರವರಿಗೆ ಉಳಿದ ಸಿಬ್ಬಂದಿ ಎಲ್ಲ ಸೇರಿ ಸೀಮಂತ ಕಾರ್ಯ ನಡೆಸಿದರು. ಸೀರೆ, ಬಳೆ, ಹೂವುಗಳನ್ನು ನೀಡಿದ್ರು. ಕವಿತಾ ಅವರು ಕುಂಸಿ ಪೊಲೀಸ್ ಠಾಣೆಗೆ ಬಂದು ಸುಮಾರು ಎರಡು ವರ್ಷವಾಗಿವೆ. ಕವಿತಾ ಅವರ ಪತಿ ಶಿವಕುಮಾರ್ ಹೊನ್ನಾಳಿ ತಾಲೂಕಿನಲ್ಲಿ ಶಿಕ್ಷಕರಾಗಿದ್ದಾರೆ.
ಪೊಲೀಸ್ ಠಾಣೆಯ ಸಿಬ್ಬಂದಿಗಳ ಜೊತೆ ಗ್ರಾಮಸ್ಥರು ಸೇರಿ ಸೀಮಂತ ನಡೆಸಿಕೊಟ್ಟರು. ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ಹಾಗೂ ಸಿಬ್ಬಂದಿ ಸೇರಿ ನಡೆಸಿಕೊಟ್ಟ ಸೀಮಂತ ಕಾರ್ಯದಿಂದ ನಮಗೆ ತುಂಬ ಸಂತೋಷವಾಗಿದೆ ಎನ್ನುತ್ತಾರೆ ಶಿವಕುಮಾರ್ ಹಾಗೂ ಕವಿತ ದಂಪತಿಗಳು.