ಶಿವಮೊಗ್ಗ:ಕೋವಿಡ್-19 ಅನ್ನು ಧೈರ್ಯವಾಗಿ ಎದುರಿಸಿ ಓಡಿಸೋಣ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ವಿಡಿಯೋ ಮೂಲಕ ಜನರಿಗೆ ಕರೆ ನೀಡಿದ್ದಾರೆ.
ಪಿಎಂ ಹೇಳಿದಂತೆ ಕೊರೊನಾ ವೈರಸ್ ಅನ್ನು ಧೈರ್ಯವಾಗಿ ಎದುರಿಸೋಣ: ಕುಮಾರ್ ಬಂಗಾರಪ್ಪ - ಸೊರಬ ಶಾಸಕ ಕುಮಾರ ಬಂಗಾರಪ್ಪ
ಕೋವಿಡ್ 19 ಅನ್ನು ಎಲ್ಲರೂ ಧೈರ್ಯವಾಗಿ ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿಎಸ್ವೈ ಅವರು ಹೇಳಿದಂತೆ ಹೋಂ ಕ್ವಾರಂಟೈನ್ ಆಗಿರೋಣ ಎಂದು ಸೊರಬ ಶಾಸಕ ಕುಮಾರ ಬಂಗಾರಪ್ಪ ವಿಡಿಯೋ ಮೂಲಕ ವಿನಂತಿಸಿಕೊಂಡಿದ್ದಾರೆ.

ಕುಮಾರ ಬಂಗಾರಪ್ಪ
ಕೋವಿಡ್-19 ಅನ್ನು ಎದುರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪ್ರಧಾನಿ ಹಾಗೂ ಸಿಎಂ ಹೇಳಿರುವ ಪ್ರಕಾರ ಮನೆಯಲ್ಲಿ ಇರಬೇಕು ಎಂದು ವಿಡಿಯೋದಲ್ಲಿ ವಿನಂತಿಸಿ ಕೊಂಡಿದ್ದಾರೆ.
ಸ್ವಚ್ಛತೆಯಿಂದ ಇರಿ, ದೇಶ ಭಕ್ತಿ ತೋರುವಂತಹ ಕಾಲವಿದು. ಮಾನವ ಕುಲವನ್ನು ಪ್ರೀತಿ ಮಾಡುವಂತಹ ಹಾಗೂ ಮಹಾಮಾರಿಯನ್ನು ಎದುರಿಸುವಂತಹ ಕೆಲಸಕ್ಕೆ ನಾವೆಲ್ಲಾ ಸಜ್ಜಾಗಬೇಕಿದೆ ಎಂದರು.