ಶಿವಮೊಗ್ಗ: ಬೇರೆ ರಾಜ್ಯಗಳಿಂದ ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ಆಗಮಿಸಿದವರ ಆರೋಗ್ಯವನ್ನು ಶಾಸಕ ಕುಮಾರ್ ಬಂಗಾರಪ್ಪ ವಿಚಾರಿಸಿದ್ದಾರೆ.
ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಕುಮಾರ್ ಬಂಗಾರಪ್ಪ - mla kumar bangarappa
ಇತ್ತೀಚಿಗೆ ಬೇರೆ ರಾಜ್ಯಗಳಿಂದ ಆಗಮಿಸಿ ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿರುವ ಜನರ ಆರೋಗ್ಯ ವಿಚಾರಿಸಲು ಖುದ್ದು ಶಾಸಕ ಕುಮಾರ್ ಬಂಗಾರಪ್ಪ ತೆರಳಿದ್ದರು. ಈ ವೇಳೆ ಆಹಾರ ಸೇರಿದಂತೆ ಮೂಲಭೂತ ಸೌಕರ್ಯದ ಬಗ್ಗೆಯೂ ವಿಚಾರಿಸಿದರು.
![ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಕುಮಾರ್ ಬಂಗಾರಪ್ಪ Kumar Bangarappa visited Quarantine center in soraba](https://etvbharatimages.akamaized.net/etvbharat/prod-images/768-512-7188178-696-7188178-1589392587418.jpg)
ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಕುಮಾರ ಬಂಗಾರಪ್ಪ
ಇಂದು ಸೊರಬ ಪಟ್ಟಣದಲ್ಲಿ ಇರುವ ಕ್ವಾರಂಟೈನ್ ಕೇಂದ್ರಗಳಿಗೆ ಕುಮಾರ್ ಬಂಗಾರಪ್ಪ ಭೇಟಿ ನೀಡಿದರು. ಈ ವೇಳೆ ಕ್ವಾರಂಟೈನ್ನಲ್ಲಿದ್ದವರ ಆರೋಗ್ಯ ವಿಚಾರಿಸುವ ಜೊತೆಗೆ ಅವರಿಗೆ ಆಹಾರ ಸೇರಿದಂತೆ ಮೂಲಭೂತ ಸೌಕರ್ಯದ ಬಗ್ಗೆಯೂ ವಿಚಾರಿಸಿದರು. ಈ ವೇಳೆ ತಾಲೂಕು ಆಡಳಿತದವರು ಹಾಜರಿದ್ದರು.