ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ 40 ದಿನಗಳ ನಂತರ ಬಸ್ ಸಂಚಾರ ಪ್ರಾರಂಭವಾಗಿದೆ. ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಬಸ್ ಸಂಚಾರ ಬೆಳಗ್ಗೆಯಿಂದ ಪ್ರಾರಂಭವಾಗಿವೆ.
ಶಿವಮೊಗ್ಗದಲ್ಲಿ ಆರಂಭವಾಯ್ತು ಕೆಎಸ್ಆರ್ಟಿಸಿ ಬಸ್ ಸಂಚಾರ - ಜಿಲ್ಲೆಯಲ್ಲಿ ಪ್ರಾರಂಭವಾದ ಕೆಎಸ್ಆರ್ಟಿಎಸ್ ಸಂಚಾರ
ಒಂದು ಬಸ್ಗೆ ಗರಿಷ್ಠ 30 ಜನ ಪ್ರಯಾಣಿಕರಿಗೆ ಅವಕಾಶ ಮಾಡಿ ಕೊಡಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗ ಬಸ್ ಪ್ರಯಾಣ ಮಾಡಿದಂತೆ, ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೂ ಬಸ್ಗಳು ಪ್ರಯಾಣ ಮಾಡುತ್ತಿವೆ.

ಬಸ್ನ್ನು ಆಯಾ ತಾಲೂಕಿನ ಪ್ರಯಾಣಿಕರ ಸಂಖ್ಯೆಯ ಮೇರೆಗೆ ಪ್ರಾರಂಭ ಮಾಡಲಾಗುತ್ತಿದೆ. ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸಿ, ಸ್ಯಾನಿಟೈಸರ್ನಿಂದ ಕೈ ಸ್ವಚ್ಛಗೊಳಿಸಿ ಬಸ್ ನಿಲ್ದಾಣದ ಒಳಗೆ ಬಿಡುತ್ತಿದ್ದಾರೆ.
ಒಂದು ಬಸ್ಗೆ ಗರಿಷ್ಠ 30 ಜನ ಪ್ರಯಾಣಿಕರಿಗೆ ಅವಕಾಶ ಮಾಡಿ ಕೊಡಲಾಗಿದೆ. ಶಿವಮೊಗ್ಗ ಜಿಲ್ಲೆಯಿಂದ ತಾಲೂಕು ಕೇಂದ್ರಗಳಿಗ ಬಸ್ ಪ್ರಯಾಣ ಮಾಡಿದಂತೆ, ತಾಲೂಕಿನಿಂದ ಜಿಲ್ಲಾ ಕೇಂದ್ರಕ್ಕೂ ಬಸ್ಗಳು ಪ್ರಯಾಣ ಮಾಡುತ್ತಿವೆ. ಬಸ್ ಸಂಚಾರದಿಂದ ನಷ್ಟವಾದರೂ ಸರ್ಕಾರದ ಆದೇಶದ ಮೇರೆಗೆ ಬಸ್ ಬಿಡಲಾಗುತ್ತಿದೆ ಎಂದು ಶಿವಮೊಗ್ಗ ಕೆಎಸ್ಆರ್ಟಿ.ಎಸ್ನ ಜಿಲ್ಲಾ ಕಂಟ್ರೋಲರ್ ನವೀನ್ ತಿಳಿಸಿದ್ದಾರೆ.