ಶಿವಮೊಗ್ಗ:ಆಶ್ಲೇಷ ಮಳೆಯಿಂದ ತುಂಬಿ ಹರಿಯುತ್ತಿರುವ ತುಂಗಾ ನದಿಗೆ ಶಾಸಕ ಕೆ.ಎಸ್.ಈಶ್ವರಪ್ಪ ತಮ್ಮ ಕುಟುಂಬ ಸಮೇತರಾಗಿ ಬಂದು ಬಾಗಿನ ಅರ್ಪಿಸಿದ್ದಾರೆ.
ತುಂಗೆಗೆ ಬಾಗಿನ ಸಮರ್ಪಿಸಿದ ಕೆ.ಎಸ್. ಈಶ್ವರಪ್ಪ - ತುಂಗಾ ನದಿಗೆ ಪೊಜೆ
ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲೂ ತೀವ್ರ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ, ಕೆಲವೆಡೆ ನೀರು ಇಲ್ಲದಂತಾಗಿದೆ. ಆದ್ದರಿಂದ ಯಾವ ಪ್ರದೇಶಕ್ಕೆ ಎಷ್ಟು ಮಳೆ ಅವಶ್ಯಕತೆ ಇದೆಯೋ ಅಷ್ಟೇ ಮಳೆಯಾಗಲಿ ಎಂದು ಪ್ರಾರ್ಥಿಸಿದ ಕೆ.ಎಸ್. ಈಶ್ವರಪ್ಪ ತುಂಗಾ ನದಿಗೆ ಕುಟುಂಬ ಸಮೇತರಾಗಿ ಆಗಮಿಸಿ ಬಾಗಿನ ಅರ್ಪಿಸಿದರು
ನಗರದ ಕೊರ್ಪಲಯ್ಯನ ಛತ್ರದ ಬಳಿ ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮಿ, ಸೊಸೆ ಶಾಲಿನಿ ಹಾಗೂ ಮೊಮ್ಮಗನ ಜೊತೆ ಸೇರಿ ತುಂಗಾ ನದಿಗೆ ಪೊಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದಾರೆ. ತುಂಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಈಶ್ವರಪ್ಪ, ಈ ವರ್ಷ ತಡವಾದರೂ ತುಂಗೆ ತುಂಬಿ ಹರಿಯುತ್ತಿದ್ದಾಳೆ. ಇದು ಎಲ್ಲರಿಗೂ ಸಂತೋಷ ತಂದಿದೆ. ಮಳೆ ಶಿವಮೊಗ್ಗ ಮಾತ್ರವಲ್ಲದೇ ರಾಜ್ಯಾದ್ಯಂತ ಸುರಿಯುತ್ತಿದೆ. ಅಲ್ಲದೇ ಇತರ ರಾಜ್ಯಗಳಲ್ಲೂ ಸಹ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಕಳೆದ ತಿಂಗಳು ಮಳೆ ಇಲ್ಲದೇ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿ ಬರದ ಪರಿಸ್ಥಿತಿ ಇತ್ತು. ಈಗ ನೋಡಿದರೆ ಪ್ರವಾಹದ ಪರಿಸ್ಥಿತಿ ಬಂದಿದೆ. ಆದ್ದರಿಂದ ಎಲ್ಲಿ, ಎಷ್ಟು ಬೇಕೋ ಅಷ್ಟು ಮಳೆ ಸುರಿಸಪ್ಪ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.