ಕರ್ನಾಟಕ

karnataka

ETV Bharat / state

ಕ್ಷಮೆ ಕೇಳದಿದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಬುದ್ಧಿ ಕಲಿಸುತ್ತಾರೆ: ಈಶ್ವರಪ್ಪ - ಸೋನಿಯಾ ಗಾಂಧಿ

ಹಿಂದೂ ಪದವು ಅಶ್ಲೀಲ ಎಂದು ಹೇಳಿಕೆ‌ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ದೇಶದ ಹಿಂದೂಗಳಿಗೆ ಕ್ಷಮೆ ಕೇಳಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ks ishwarappa reacts on jarakihol
ಕ್ಷಮೆ ಕೇಳದಿದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಬುದ್ಧಿ ಕಲಿಸುತ್ತಾರೆ: ಈಶ್ವರಪ್ಪ

By

Published : Nov 8, 2022, 2:44 PM IST

ಶಿವಮೊಗ್ಗ: ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಈಶ್ವರಪ್ಪ ಹಿಂದೂ ಧರ್ಮದ ಬಗ್ಗೆ ಮಾತನಾಡದಿದ್ದರೆ ಕೆಲವರಿಗೆ ತಿಂದ ಅನ್ನ ಕರಗುವುದಿಲ್ಲ, ಅವರದೇ ಪಕ್ಷದ ಸುರ್ಜಿವಾಲ ಅವರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಇದ್ದರೆ ಸತೀಶ್ ಜಾರಕಿಹೊಳಿಯವರ ಮೇಲೆ ಕ್ರಮ ತೆಗೆದುಕೊಳ್ಳಲಿ, ಅವರನ್ನು ಪಕ್ಷದಿಂದ ಅಮಾನತುಗೊಳಿಸಲಿ ಎಂದರು. ಸತೀಶ್ ರವರು ಸೋನಿಯಾ ಗಾಂಧಿ ಹಾಗೂ ಮುಸಲ್ಮಾನರನ್ನು ಮೆಚ್ಚಿಸಲು ಈ ರೀತಿ ಮಾತನಾಡುತ್ತಿದ್ದಾರೆ. ಇದರಿಂದ ಮೊದಲು ಹಿಂದೂಗಳಿಗೆ ಕ್ಷಮೆ ಕೇಳಲಿ, ಅವರು ಕ್ಷಮೆ ಕೇಳದೆ ಇದ್ದರೆ ಮುಂದಿನ ಚುನಾವಣೆಯಲ್ಲಿ ಹಿಂದೂಗಳು ಬುದ್ಧಿ ಕಲಿಸುತ್ತಾರೆ. ಎಂದ ಹೇಳಿದರು.

ಅಲೆಮಾರಿ ರಾಜಕಾರಣಿ:ಸಿದ್ದರಾಮಯ್ಯ ನಮ್ಮ ಪಕ್ಷದ ಜನ ಸಂಕಲ್ಪ ಯಾತ್ರೆಯನ್ನು ಟೀಕಿಸುವುದಕ್ಕೂ ಮೊದಲು ಸಿದ್ದರಾಮೋತ್ಸವ ಕಾರ್ಯಕ್ರಮದ ಲೆಕ್ಕ ಕೊಡಿ ಎಂದರು. ಸಿದ್ದರಾಮಯ್ಯ ಮೊದಲು ಸೋನಿಯಾ ಗಾಂಧಿಯನ್ನು ಮೆಚ್ಚಿಸಬೇಕಿತ್ತು, ಈಗ ಮಲ್ಲಿಕಾರ್ಜುಜ ಖರ್ಗೆಯನ್ನು ಮೆಚ್ಚಿಸಲು ಹೊರಟಿದ್ದಾರೆ. ಚಾಮುಂಡೇಶ್ವರಿ ಸೋತು, ಬದಾಮಿ ಕಡೆ ಹೋದರು, ಈಗ ಬದಾಮಿ ಸೋಲುತ್ತೇನೆ ಎಂದು ಬೇರೆ ಕ್ಷೇತ್ರ ಹುಡುಕುತ್ತಿದ್ದಾರೆ, ಅವರಿಗ ಅಲೆಮಾರಿ ರಾಜಕಾರಣಿ ಎಂದರು.

ಇದನ್ನೂ ಓದಿ:ಹಿಂದೂ ನಮ್ಮ‌ ಶಬ್ದ ಅಲ್ಲವೇ ಅಲ್ಲ : ಸತೀಶ ಜಾರಕಿಹೊಳಿ‌

ABOUT THE AUTHOR

...view details