ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಆಸ್ಪತ್ರೆಯಲ್ಲಿ ತಂದಿರುವ ಸುಧಾರಣೆಯನ್ನು ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಶ್ರೀಧರ್ರವರು ವಿವರಿಸಿದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಸೇರಿದಂತೆ ಇತರೆ ಪರೀಕ್ಷೆಗಳ ಮಾಹಿತಿಯನ್ನು ವಿವರಿಸಿದರು.
ಹೊಸದಾಗಿ ಉದ್ಘಾಟನೆಗೊಂಡ ಆಕ್ಸಿಜನ್ ಟ್ಯಾಂಕ್ ನಂತರ ಆಸ್ಪತ್ರೆ ಒಳಗೆ ತೆರಳಿದ ಸಚಿವರು ಕೋವಿಡ್ ವಾರ್ಡ್ಗಳಲ್ಲಿನ ಸೋಂಕಿತರಿಗೆ ಕಲ್ಪಿಸಿರುವ ಇಂಟರ್ಕಾಮ್ ವ್ಯವಸ್ಥೆಯನ್ನು ವೀಕ್ಷಣೆ ಮಾಡಿದರು. ಇಂಟರ್ಕಾಮ್ ವ್ಯವಸ್ಥೆಯಲ್ಲಿ ಕೋವಿಡ್ ವಾರ್ಡ್ನಿಂದ ನೇರವಾಗಿ ಆಸ್ಪತ್ರೆ ಸೂಪರಿಂಟೆಂಡೆಂಟ್ ಅವರೊಂದಿಗೆ ನೇರವಾಗಿ ಮಾತನಾಡಬಹು. ಅಲ್ಲದೆ ವೈದ್ಯರು ಸಹ ಅಲ್ಲಿನ ನರ್ಸ್ ಗಳೊಂದಿಗೆ ಮಾತನಾಡಬಹುದು. ಬೇರೆ ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದರ ಬಗ್ಗೆ ನಿಗಾವಹಿಸಲು ಅನುಕೂಲವಾಗಿದೆ. ಇದರಿಂದ ಆಸ್ಪತ್ರೆಯ ಮೇಲಧಿಕಾರಿಗಳು ಕಿರಿಯ ವೈದ್ಯರ ಬಗ್ಗೆ ನಿಗಾವಹಿಸಲು ಸಹಕಾರಿ ಆಗುತ್ತದೆ ಎಂದರು.
ಇನ್ನೂ ಆಸ್ಪತ್ರೆಗೆ ಬಹಳ ಅವಶ್ಯಕವಾಗಿದ್ದ ಆಕ್ಸಿಜನ್ ಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಾಕಷ್ಟು ಬೇಡಿಕೆ ಇದ್ದ ಆಕ್ಸಿಜನ್ ಟ್ಯಾಂಕ್ ಅನ್ನು ಸ್ಥಾಪನೆ ಮಾಡಲಾಗಿದೆ. ಆಕ್ಸಿಜನ್ ಕೊರತೆಯ ಬಗ್ಗೆ ದೂರು ಕೇಳಿ ಬರುತ್ತಿತ್ತು. ಈಗ ಈ ಸಮಸ್ಯೆಯನ್ನು ಬಗೆಹರಿದಿದೆ. ಇದರಿಂದ ಕೋವಿಡ್ ಸೋಂಕಿತರು ಉಪಯೋಗ ಪಡೆದುಕೊಳ್ಳಬಹುದು ಎಂದರು.
ಈ ವೇಳೆ ಡಿಸಿ ಶಿವಕುಮಾರ್, ಡಾ.ಶ್ರೀಧರ್, ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಸೇರಿ ಇತರರು ಹಾಜರಿದ್ದರು.