ಕರ್ನಾಟಕ

karnataka

ETV Bharat / state

ಶಿವಮೊಗ್ಗಕ್ಕೆ ಬ್ರಿಟನ್​ನಿಂದ 23 ಜನ ಆಗಮಿಸಿದ್ದಾರೆ: ಸಚಿವ ಈಶ್ವರಪ್ಪ - ಶಿವಮೊಗ್ಗ

ಜನವರಿ‌ 1 ರಿಂದ 10 ನೇ ತರಗತಿ ಹಾಗೂ ಪಿಯು ಕಾಲೇಜು ಪ್ರಾರಂಭ ಮಾಡಲಾಗುತ್ತಿದೆ. ಇದಕ್ಕೆ ಪೋಷಕರು ಸಹ ಸಹಕರಿಸಿ ಮಕ್ಕಳನ್ನು ಕಳುಹಿಸಿ ಕೊಡಬೇಕು. ಇವರಿಗೆ ಪಠ್ಯದಲ್ಲಿ ಯೋಗ ತರಗತಿ ಕಡ್ಡಾಯ ಮಾಡಲು ತೀರ್ಮಾನ ಮಾಡಲಾಗಿದೆ.

K.S eshwarappa
ಸಚಿವ ಈಶ್ವರಪ್ಪ

By

Published : Dec 24, 2020, 7:02 PM IST

ಶಿವಮೊಗ್ಗ: ನಗರಕ್ಕೆ‌ 23 ಜನ ಬ್ರಿಟನ್​ನಿಂದ ಬಂದಿದ್ದಾರೆ. ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕೆಲವರ ಸ್ವ್ಯಾಬ್ ಅನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಬೆಂಗಳೂರಿನಿಂದ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೆ.ಎಸ್​ ಈಶ್ವರಪ್ಪ ತಿಳಿಸಿದರು.

ಬ್ರಿಟನ್​ನಿಂದ ಆಗಮಿಸಿದವರ ಬಗ್ಗೆ ಮಾಹಿತಿ ನೀಡಿದ ಸಚಿವರು

ಸದ್ಯ ಜಿಲ್ಲೆಯಲ್ಲಿ 39 ಜನ ಕೊರೊನಾ ಸೋಂಕಿತರು ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಬಗ್ಗೆ ಜಾಗರೂಕರಾಗಿ, ಇದನ್ನು ಯಾರು ಹಗುರುವಾಗಿ ತೆಗೆದುಕೊಳ್ಳಬಾರದು.‌ ಎಲ್ಲರೂ ಸಹ ಮಾಸ್ಕ್‌ ಧರಿಸಿ ಓಡಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಸಿಎಂ ರಾಜೀನಾಮೆ ಕೇಳುವ ನೈತಿಕತೆ ವಿರೋಧ ಪಕ್ಷದವರಿಗಿಲ್ಲ: ಸಚಿವ ಈಶ್ವರಪ್ಪ

ಜನವರಿ‌ 1 ರಿಂದ 10 ನೇ ತರಗತಿ ಹಾಗೂ ಪಿಯು ಕಾಲೇಜು ಪ್ರಾರಂಭ ಮಾಡಲಾಗುತ್ತಿದೆ. ಇದಕ್ಕೆ ಪೋಷಕರು ಸಹ ಸಹಕರಿಸಿ ಮಕ್ಕಳನ್ನು ಕಳುಹಿಸಿ ಕೊಡಬೇಕು. ಇವರಿಗೆ ಪಠ್ಯದಲ್ಲಿ ಯೋಗ ತರಗತಿ ಕಡ್ಡಾಯ ಮಾಡಲು ತೀರ್ಮಾನ ಮಾಡಲಾಗಿದೆ. ಜಿಲ್ಲೆಯಲ್ಲಿ 476 ಸರ್ಕಾರಿ‌ ಶಾಲೆಗಳಿವೆ. 134 ಅನುದಾನ ರಹಿತ ಶಾಲೆಗಳಿವೆ. ಒಟ್ಟು 610 ಶಾಲೆಗಳಾಗುತ್ತವೆ. ಜೊತೆಗೆ ಜ್ಯೂನಿಯರ್ ಕಾಲೇಜುಗಳಲ್ಲಿ ಪ್ರಾರಂಭ ಮಾಡಲಾಗುತ್ತಿದೆ. ಈ ಎಲ್ಲ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು, ಆರ್ಯವೇದ ತರಬೇತಿ ಪಡೆದವರನ್ನು ಹಾಗೂ ಖಾಸಗಿ ಯೋಗ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಚಿಂತನೆ ಇದೆ. ಡಿಸೆಂಬರ್ 31 ರಂದು ಯೋಗದ ತರಬೇತಿ ನೀಡಲಾಗುತ್ತದೆ ಎಂದರು.

ABOUT THE AUTHOR

...view details