ಶಿವಮೊಗ್ಗ:ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಹಕಾರ ನೀಡುವ ಮುಸ್ಲಿಮರು, ಕಾಶಿಯಲ್ಲೂ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವನ್ನು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ವ್ಯಕ್ತಪಡಿಸಿದ್ದಾರೆ.
ಕಾಶಿ ವಿಶ್ವನಾಥನ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದರು. ಹಿಂದುಗಳಿಗೆ ವರ್ಷದಲ್ಲಿ ಒಂದು ದಿನ ಮಾತ್ರ ಪೂಜೆಗೆ ಅವಕಾಶ ಇತ್ತು. ಆ ಸ್ಥಳದಲ್ಲಿ ಗಣಪತಿ, ಮಾರುತಿ ವಿಗ್ರಹ, ಶೃಂಗಾರ ಗೌರಿ, ಈಶ್ವರಲಿಂಗ ಎಲ್ಲ ಇದೆ. ಈ ದೇಶ ಶಾಂತಿಯಿಂದ ಇರಬಾರದು ಎಂಬ ಅಪೇಕ್ಷೆ ಇರುವವರು, ನ್ಯಾಯಾಲಯ ನಂಬದೇ ಇರುವವರು ಮಾತ್ರ ಪೂಜೆಗೆ ಅಡ್ಡಿ ಪಡಿಸಬಹುದು. ಮುಸಲ್ಮಾನ ಹಿರಿಯರು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಪ್ರಾರ್ಥನೆ ಮಾಡ್ತೇನೆ ಎಂದರು.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಗಲಾಟೆ ನಡೆಸುವವರಿಗೆ ಬುದ್ಧಿ ಹೇಳಿ:ಸಂವಿಧಾನ ಮೀರಿ, ನ್ಯಾಯಾಲಯದ ತೀರ್ಪು ಮೀರಿ ಗಲಾಟೆ ನಡೆಸುವವರಿಗೆ ಬುದ್ಧಿ ಹೇಳಬೇಕು. 350ಕ್ಕೂ ಹೆಚ್ಚು ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆ. ಅಯೋಧ್ಯೆ, ಕಾಶಿ, ಮಥುರಾ ಮೂರು ಹಿಂದೂಗಳಿಗೆ ಪವಿತ್ರವಾದ ಕ್ಷೇತ್ರಗಳಾಗಿವೆ. ಮುಸಲ್ಮಾನರು ಹೊಸದಾಗಿ ಕಟ್ಟಿದ ಮಸೀದಿಗಳಿಗೆ ಹಿಂದೂಗಳು ತೊಂದರೆ ಕೊಡಲ್ಲ. ಆದರೆ, ಹಳೆ ದೇವಸ್ಥಾನ ಒಡೆದು ಮಸೀದಿ ಕಟ್ಟಿದರೆ, ಹಿಂದೂಗಳು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ:ಸಿದ್ದು ಸರ್ಕಾರವನ್ನು ಸಮರ್ಥವಾಗಿ ಟೀಕಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಅವರು ತಮ್ಮ ಗಂಟಲಿನಿಂದ ಜೋರಾಗಿ ವಾಗ್ದಾಳಿ ಮಾಡಿದರೆ, ಜನ ಒಪ್ಪುವುದಿಲ್ಲ. ಇಷ್ಟು ದಿನ ಬಿಜೆಪಿಯ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ನಾವು ಭ್ರಷ್ಟಾಚಾರ ಬಿಚ್ಚಿಡ್ತೀವಿ ಅಂತಾ ಮೊದಲಿನಿಂದಲೂ ಹೇಳಿಕೊಂಡು ಬಂದರು. ಆದರೆ, ಇದುವರೆಗೂ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಶೇ 40ರಷ್ಟು ಅಂತಾ ಕೆಂಪಣ್ಣ ಹೇಳಿದರು, ಆದರೆ ಅವರು ಸಹ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಒಬ್ಬನೇ ಒಬ್ಬ ಸಚಿವನ ವಿರುದ್ಧ ದಾಖಲೆ ಬಿಡುಗಡೆ ಮಾಡಿದ್ರೆ ಉತ್ತರ ಕೊಡ್ತೀವಿ ಎಂದರು. ಕೆಂಪಣ್ಣ ಕಾಂಗ್ರೆಸ್ ಏಜೆಂಟ್ ಅನ್ನುವ ಅನುಮಾನ ರಾಜ್ಯದ ಜನರದ್ದಾಗಿದೆ ಎಂದು ಟಾಂಗ್ ನೀಡಿದರು.
ಸದನಕ್ಕೆ ಗೈರು:ನನಗೆ ಕಾಲು ನೋವಾಗಿರುವ ಕಾರಣ ಭಾಗವಹಿಸಿಲ್ಲ ಅಷ್ಟೇ ಎಂದು ಸದನಕ್ಕೆ ಗೈರು ಆಗಿರುವುದಕ್ಕೆ ಸ್ಪಷ್ಟನೆ ನೀಡಿದರು. ಇದರಲ್ಲಿ ಬೇರೆ ವಿಶೇಷ ಏನಿಲ್ಲ. ನೀವು ಹುಡುಕಿದರೂ ಸಿಗಲ್ಲ. ನನಗೂ ಸದನದಲ್ಲಿ ಭಾಗವಹಿಸಬೇಕು ಎಂಬ ಆಸೆ ಇದೆ. ಆದರೆ ವೈದ್ಯರು ರೆಸ್ಟ್ ಮಾಡಿ ಅಂದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಹಿಂದೂಗಳ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿರುವುದು ಸಂತಸದ ವಿಚಾರ: ಕೆ ಎಸ್ ಈಶ್ವರಪ್ಪ
ಸಿದ್ದರಾಮಯ್ಯ ಅವರು ಬೋಟ್ ನಲ್ಲಿ ತೇಲಿಕೊಂಡು ಹೋಗಿದ್ದನ್ನು ನೋಡಿದ್ದೇನೆ. ಒಂದೂವರೆ ಅಡಿ ನೀರು ನನ್ನ ಮೊಮ್ಮಗ ಆ ನೀರಿನಲ್ಲಿ ನಡೆದುಕೊಂಡು ಹೋಗ್ತಾನೆ ಎಂದು ಸಿದ್ದರಾಮಯ್ಯ ಪ್ರವಾಹ ವೀಕ್ಷಣೆಯ ಬಗ್ಗೆ ಕಿಡಿಕಾರಿದರು. ಇವರು ಒಂದೂವರೆ ಅಡಿ ನೀರಿಗೆ ಬೋಟ್ನಲ್ಲಿ ನಿಂತುಕೊಂಡು, ನಾನು ವಿಪಕ್ಷ ನಾಯಕನಾಗಿ ವೀಕ್ಷಣೆ ಮಾಡ್ದೆ ಅಂತಾ ತೋರಿಸಲು ಮಾಡಿದ ನಾಟಕ ಎಂದು ಕುಟುಕಿದರು.
ಒತ್ತುವರಿ ಬಗ್ಗೆ ಜನರಿಂದ ಮೆಚ್ಚುಗೆ: ಬೆಂಗಳೂರಿನಲ್ಲಿ ಅಕ್ರಮ ಒತ್ತುವರಿಯನ್ನು ಬಿಜೆಪಿ ಸರ್ಕಾರ ತೆರವು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ನಲಪಾಡ್ ಅವರ ಸಂಸ್ಥೆಯಿಂದಲೇ ಒತ್ತುವರಿ ಆಗಿದೆ ಅಂತಾ ಒಪ್ಪಿಕೊಂಡಿದ್ದಾರೆ. ಇಷ್ಟು ವರ್ಷ ಒತ್ತುವರಿ ಅವಕಾಶ ಮಾಡಿ ಕೊಟ್ಟಿದ್ದೇ ಕಾಂಗ್ರೆಸ್ ಅಲ್ವೆ ಎಂದು ಪ್ರಶ್ನಿಸಿದರು. ಯಾವುದೇ ಪಕ್ಷ ನೋಡದೇ ಒತ್ತುವರಿಯನ್ನು ಸರ್ಕಾರ ತೆರವು ಮಾಡುತ್ತಿದೆ. ಪ್ರಭಾವಿ ವ್ಯಕ್ತಿಗಳ ಬಿಟ್ಟು ಬಡವರ ಕಟ್ಟಡ ಒಡೆಯುತ್ತಿದ್ದಾರೆ ಎಂಬ ಬಣ್ಣ ಕಟ್ಟುತ್ತಿದ್ದಾರೆ. ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಇದ್ದದ್ದೆ, ಒತ್ತುವರಿ ತೆರವು ಮಾಡಲು ಜನರೇ ಸಹಕಾರ ಕೊಡ್ತಿದ್ದಾರೆ ಎಂದರು.