ಕರ್ನಾಟಕ

karnataka

ETV Bharat / state

ಸಿಎಂ ಖುರ್ಚಿ ಖಾಲಿ ಇಲ್ಲದಿದ್ರೂ ಟವಲ್ ಹಾಕ್ತಿದ್ದಾರೆ: ದೋಸ್ತಿ ಸರ್ಕಾರದ ಭವಿಷ್ಯ ಬಿಚ್ಚಿಟ್ಟ ಈಶ್ವರಪ್ಪ - Shivamogga

ಸಮೀಕ್ಷೆಯಂತೆ ಕರ್ನಾಟಕದಲ್ಲಿ ಬಿಜೆಪಿಗೆ ಕನಿಷ್ಠ 25 ಸೀಟು ಬರಲಿವೆ. ಫಲಿತಾಂಶದ ನಂತ್ರ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೆಯೂ ಗೊತ್ತಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ದೋಸ್ತಿ ಸರ್ಕಾರದ ಭವಿಷ್ಯ ಹೇಳಿದರು.

ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

By

Published : May 20, 2019, 1:54 PM IST

ಶಿವಮೊಗ್ಗ:ದೇಶದ ರಕ್ಷಣೆ ಮಾಡುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. ಹಾಗಾಗಿ ಈ ಬಾರಿಯೂ ದೇಶದ ಜನರು ನರೇಂದ್ರ ಮೋದಿ ಅವರಿಗೆ ಅಧಿಕಾರ ಕೊಡಲು ಒಪ್ಪಿಕೊಂಡಿದ್ದಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಚುನಾವಣೋತ್ತರ ಸಮೀಕ್ಷೆ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸಮೀಕ್ಷೆಯನ್ನು ನೋಡಿದ್ರೆ ನಿಜಕ್ಕೂ‌ ಸಂತೋಷವಾಗುತ್ತದೆ. ದೇಶದಲ್ಲಿ ಮೊದಲನೆ ಬಾರಿ ಬಿಜೆಪಿ ಅಸ್ಥಿತ್ವವೇ ಇಲ್ಲದ ಕಡೆ ಎನ್​ಡಿಎ ಗೆಲ್ಲುತ್ತಿರುವುದು ವಿಶೇಷವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಗುಡ್ಡಗಾಡು ಜನರು ಹೆಚ್ಚಿರುವ ಕಡೆಯೂ ಈ ಬಾರಿ ಎನ್​ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗದಲ್ಲಿ ನಾಮಪತ್ರ ಸಲ್ಲಿಕೆಯ ದಿನವೇ ಗೆಲ್ಲುತ್ತೆವೆ ಎಂದು ಹೇಳಿದ್ದೆವು. ಅದರಂತೆ ಗೆಲ್ಲುತ್ತೇವೆ. ಅಲ್ಲದೆ ಸಮೀಕ್ಷೆಯಂತೆ ಕರ್ನಾಟಕದಲ್ಲಿ ಬಿಜೆಪಿಗೆ ಕನಿಷ್ಠ 25 ಸೀಟು ಬರಲಿವೆ. ಫಲಿತಾಂಶದ ನಂತ್ರ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೆಯೂ ಗೊತ್ತಿಲ್ಲ. ಮೈತ್ರಿ ಎನ್ನುವ ಹೆಸರಿನಲ್ಲಿ ಸೀಟು ಹಂಚಿಕೆ ವೇಳೆಯೇ ಕಾಂಗ್ರೆಸ್​-ಜೆಡಿಸ್​ನವರು ಜಗಳವಾಡಿಕೊಂಡಿದ್ದರು. ಚುನಾವಣೆ ಸ್ಪರ್ಧೆಯ ನಂತರ ಕಾಂಗ್ರೆಸ್​ನವರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲಿಸಿಲ್ಲ. ಜೆಡಿಎಸ್​ನವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್​ ಮುಖಂಡರು ನೇರವಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿದ್ದಾರೆ ಎಂದರು.

ಸಿಎಂ ಖುರ್ಚಿ ಖಾಲಿ ಇಲ್ಲದೇ ಇದ್ದರು ಸಹ ಎಲ್ಲರು ಟವಲ್ ಹಾಕುತ್ತಿದ್ದಾರೆ. ಲೋಕಸಭಾ ಚುನಾವಣೆಯ ನಂತ್ರ ರಾಜಕೀಯ‌ ಧ್ರುವಿಕರಣವಾಗುತ್ತದೆ. ಮಹಾಘಟಬಂಧನ್ ಈಗಾಗಲೇ ಛಿದ್ರ ಛಿದ್ರವಾಗಿದೆ. ಫಲಿತಾಂಶ ಬಂದ ಬಳಿಕ ಅವರು ಎಲ್ಲಿದ್ದಾರೆ ಎಂದು ಹುಡುಕಬೇಕಾಗುತ್ತದೆ. ಬಿಜೆಪಿ ಸೋತು ಸೋತು ಗೆಲುವು ಕಂಡಿದೆ. ಈಗ ನಮ್ಮದೆನಿದ್ದರೂ ಗೆಲುವು ಮಾತ್ರ. ಆದ್ರೆ ಕುಮಾರಸ್ವಾಮಿರವರಿಗೆ ಸೋತು ಗೊತ್ತಿಲ್ಲ. ಬೇರೆಯವರಿಗೂ ಸೇರಿ ಸರ್ಕಾರ ರಚಿಸಿ ಗೊತ್ತು. ಫಲಿತಾಂಶದ ಬಳಿಕ ಕಾಂಗ್ರೆಸ್​-ಜೆಡಿಎಸ್​ ಪಕ್ಷದವರು ಯಾವ ಶಾಸಕರು ಹೊರಬರುತ್ತಾರೋ ಗೂತ್ತಿಲ್ಲ. ಬಿಜೆಪಿಯ 104 ಶಾಸಕರು ಹುಲಿ ಮರಿಗಳಿದ್ದಂತೆ. ನಮ್ಮ ಬಳಿ ಯಾರು ಬರಲು‌ ಸಾಧ್ಯವಿಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು‌ ಆಪರೇಷನ್ ಹಸ್ತದ ಕುರಿತು ಪ್ರತಿಕ್ರಿಯೆ ನೀಡಿದರು.

ABOUT THE AUTHOR

...view details