ಕರ್ನಾಟಕ

karnataka

ETV Bharat / state

ಬೊಮ್ಮಾಯಿ ಸಂಪುಟ ಹೇಗಿರಲಿದೆ ಎಂಬುದು ಭಗವಂತನಿಗೂ ಗೊತ್ತಿಲ್ಲ: ಈಶ್ವರಪ್ಪ

ಇನ್ನೊಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಯಾರ ಒತ್ತಡಕ್ಕೂ ಕೇಂದ್ರದ ನಾಯಕರು ಮಣಿಯಲ್ಲ, ಸಂಪುಟದಲ್ಲಿ ಯಾರು ಸೇರುತ್ತಾರೆ, ಯಾರು ಬಿಡುತ್ತಾರೆ ಎಂಬುದು ನನಗೂ ಗೊತ್ತಿಲ್ಲ ಎಂದು ಕೆ ಎಸ್​ ಈಶ್ವರಪ್ಪ ಹೇಳಿದ್ದಾರೆ.

eshwarappa
ಕೆ ಎಸ್​ ಈಶ್ವರಪ್ಪ ಪ್ರತಿಕ್ರಿಯೆ

By

Published : Aug 2, 2021, 4:43 PM IST

ಶಿವಮೊಗ್ಗ: ಬೊಮ್ಮಾಯಿ ಅವರ ಸಚಿವ ಸಂಪುಟ ಹೇಗಿರಲಿದೆ ಎಂಬುದು ಭಗವಂತನಿಗೂ ಗೊತ್ತಿಲ್ಲ. ಅದನ್ನು ನಿರ್ಧಾರ ಮಾಡುವುದು ನಮ್ಮ ಕೇಂದ್ರ ನಾಯಕರು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕೆ ಎಸ್​ ಈಶ್ವರಪ್ಪ ಪ್ರತಿಕ್ರಿಯೆ

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದೆರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗಲಿದೆ. ಆದಷ್ಟು ಬೇಗ ಸಂಪುಟ ರಚನೆ ಮುಗಿಸಬೇಕೆಂಬ ಆಸೆ ಕೇಂದ್ರದ ನಾಯಕರಿಗೂ ಇದೆ. ಎಲ್ಲ ಆಯಾಮದಲ್ಲೂ ನಮ್ಮ ಕೇಂದ್ರದ ನಾಯಕರು ಚರ್ಚೆ ನಡೆಸುತ್ತಿದ್ದು, ಸಂಪುಟದಲ್ಲಿ ಯಾರು ಸೇರುತ್ತಾರೆ, ಯಾರು ಬಿಡುತ್ತಾರೆ ಎಂಬುದು ನನಗೂ ಗೊತ್ತಿಲ್ಲ ಎಂದ್ರು. ನನಗೆ ಡಿಸಿಎಂ ಸ್ಥಾನ ನೀಡಬೇಕು ಎಂಬ ವಿಚಾರದ ಬಗ್ಗೆಯೂ ನನಗೆ ಗೊತ್ತಿಲ್ಲ. ಯಾರ ಒತ್ತಡಕ್ಕೂ ಕೇಂದ್ರದ ನಾಯಕರು ಮಣಿಯಲ್ಲ ಅಂದ್ರು.

ಈ ನಡುವೆ ಯುವಕರಿಗೆ ಆದ್ಯತೆ ಹಾಗೂ ಹಳಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಬರುವ 2022ರ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಕೃಷ್ಣನ ತಂತ್ರಗಾರಿಕೆಯನ್ನು ಪಕ್ಷ ಅನುಸರಿಸಬಹುದು. ಲಾಬಿ ಹಾಗೂ ಒತ್ತಡಕ್ಕೆಲ್ಲ ಹೈ ಕಮಾಂಡ್ ಮಣಿಯುತ್ತದೆ ಎಂದು ನನಗೆ ಅನಿಸುವುದಿಲ್ಲ. ಹೀಗಾಗಿ ನಮ್ಮ ಪಕ್ಷಕ್ಕೆ ವಲಸೆ ಬಂದವರಲ್ಲಿ ಕೆಲವರಿಗೆ ಅವಕಾಶ ಸಿಗದೇ ಇರಬಹುದು ಎಂದರು.

ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ:

ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ,ಅಧಿಕಾರವಿಲ್ಲದಿದ್ದರೂ ಪಕ್ಷ ನಮ್ಮ ಅನುಭವ ಬಳಕೆ ಮಾಡಿಕೊಳ್ಳಬಹುದು. ಬೊಮ್ಮಾಯಿ ಸರ್ಕಾರದ ಭವಿಷ್ಯ ಮುಂದಿನ 6 ತಿಂಗಳು ಎಂಬ ಸ್ವಾಮೀಜಿ ಹೇಳಿಕೆ ಬಗ್ಗೆ ಏನೂ ಹೇಳಲಾರೆ. ಅದು ಸತ್ಯವೂ ಆಗಬಹುದು, ಸುಳ್ಳೂ ಆಗಬಹುದು. ಟಿವಿ ಚಾನಲ್​ಗಳು ಹೇಗೋ, ಈ ಭವಿಷ್ಯ ನುಡಿಯುವವರು ಕೂಡ ಹಾಗೆ, ಯಾರನ್ನೂ ಪೂರ್ಣ ನಂಬುವ ಹಾಗಿಲ್ಲ ಎಂದ್ರು.

ಒಂದೊಂದು ಟಿವಿ ಚಾನಲ್​ಗಳು ಒಂದೊಂದು ರೀತಿ ಸುದ್ಧಿ ಬಿತ್ತರಿಸುತ್ತವೆ. ನನ್ನ ಹಿರಿತನ, ಅನುಭವ ಸಚಿವ ಸಂಪುಟದಲ್ಲಿ ಇದ್ದು ಬಳಕೆ ಮಾಡಿಕೊಳ್ಳಬೇಕೆಂದೇನೂ ಇಲ್ಲ. ಯಾವುದೇ ಗೊಂದಲವಿಲ್ಲದೇ, ನಮ್ಮ ಸಚಿವ ಸಂಪುಟ ರಚನೆಯಾಗಲಿದೆ. ಬಿಜೆಪಿಗೆ ಬಂದಿರುವುದು ನಮ್ಮ ಪುಣ್ಯ ಎಂದು 17 ಜನ ಕಾಂಗ್ರೆಸ್- ಜೆಡಿಎಸ್​ನಿಂದ ಬಂದ ಶಾಸಕರು ಹೇಳುತ್ತಿದ್ದಾರೆ. ಅವರಲ್ಲಿ ಕೆಲವರಿಗೆ ಸಚಿವ ಸ್ಥಾನ ಸಿಗದೇ ಇದ್ದರೂ ಅವರು ಬೇಸರ ಪಟ್ಟುಕೊಳ್ಳುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ABOUT THE AUTHOR

...view details