ಕರ್ನಾಟಕ

karnataka

ಕ್ಲೀನ್ ಚಿಟ್ ಸಿಕ್ಕ ನಂತರ ಸಾಕ್ಷ್ಯ ಒದಗಿಸಿದ್ದರ ಹಿಂದೆ ಷಡ್ಯಂತ್ರ ಅಡಗಿದೆ: ಕೆಎಸ್ ಈಶ್ವರಪ್ಪ ಅನುಮಾನ

By

Published : Jan 6, 2023, 9:01 PM IST

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ - ಕ್ಲೀನ್ ಚಿಟ್ ಸಿಕ್ಕ ನಂತರ ಈಗ ಸಾಕ್ಷ್ಯ ಒದಗಿಸುತ್ತಾರೆ ಎಂದರೆ ಇದರ ಹಿಂದೆ ಷಡ್ಯಂತ್ರ ಅಡಗಿದೆ - ಅನುಮಾನ ವ್ಯಕ್ತಪಡಿಸಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ.

KS Eshwarappa on Behind the conspiracy
ಕ್ಲೀನ್ ಚಿಟ್ ಸಿಕ್ಕ ನಂತರ ಸಾಕ್ಷ್ಯ ಒದಗಿಸಿದರ ಹಿಂದೆ ಷಡ್ಯಂತ್ರ ಅಡಗಿದೆ: ಕೆಎಸ್ ಈಶ್ವರಪ್ಪ ಅನುಮಾನ

ಮಾಜಿ ಸಚಿವ ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕ ನಂತರ ಈಗ ಸಾಕ್ಷ್ಯ ಒದಗಿಸುತ್ತಾರೆ ಎಂದರೆ ಇದರ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯಾರೂ ಏನೂ ಕೊಡ್ತಾರೆ, 25 ಸಾವಿರಕ್ಕೂ 50 ಸಾವಿರ ಕೊಡುತ್ತಾರೆ ಅಂದರೆ ಅದಕ್ಕೆಲ್ಲಾ ನಾನು ಪ್ರತಿಕ್ರಿಯಿಸುವುದಿಲ್ಲ ಎನ್ನುತ್ತಲೆ ಸಂತೋಷ್ ಪಾಟೀಲ್ ಕುಟುಂಬದವರು ಈಗ ಸಾಕ್ಷ್ಯ ನೀಡುತ್ತಿರುವುದಕ್ಕೆ ಅಸಮಾಧಾನ ಹೊರ ಹಾಕಿದರು‌.

ಹಿಂದೆ ತನಿಖೆ ನಡೆಸುವಾಗ ಎಲ್ಲವನ್ನೂ ಕೊಡುವ ಅವಕಾಶವಿತ್ತು. ಆಗ ಯಾಕೆ ಅವರು ಸಾಕ್ಷ್ಯವನ್ನು ನೀಡಲಿಲ್ಲ. ಇದು ರಾಜಕೀಯವಾಗಿ ಯಾರು ಅವರಿಗೆ ಪ್ರೇರಣೆ ನೀಡುತ್ತಿರಬೇಕು. ಈ ರೀತಿ ಮಾಡುವುದರಿಂದ ಬಿಜೆಪಿ ಹಾಗೂ ನನಗೆ ಕೆಟ್ಟ ಹೆಸರು ಬರುತ್ತದೆ ಅವರನ್ನು ಯಾರೂ ಆಟ ಆಡಿಸುತ್ತಿದ್ದಾರೆ ಎಂಬ ಶಂಕೆಯನ್ನು ಹೊರ ಹಾಕಿದರು.

ನನ್ನನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್:ಇಂತಹ ಆಟಕ್ಕೆಲ್ಲಾ ನಾನು ಎಂದೂ ಬಗ್ಗುವುದಿಲ್ಲ. ಈಗ ಪ್ರಶ್ನೆ ಬಂದಿರುವುದು ಕ್ಲಿನ್ ಚಿಟ್ ಸಿಕ್ಕ ನಂತರ ಕೇಸು ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಮತ್ತೆ ಈ ವಿಚಾರ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ನನ್ನನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ನಾವು ಬಗ್ಗುವುದಿಲ್ಲ.

ಇದರಿಂದಲೇ ನನಗೆ ಮಂತ್ರಿಸ್ಥಾನ ಮುಂದು ಹೋಗುತ್ತಿದೆಯೇ ನನಗೆ ಗೂತ್ತಿಲ್ಲ ಎಂದರು. ಇದಕ್ಕೂ ಅದಕ್ಕೂ ಏನೂ ಸಂಬಂಧ ಗೂತ್ತಿಲ್ಲ. ನನಗೆ ಮಂತ್ರಿ ಸ್ಥಾನ ನೀಡಬೇಕು ಎಂದಾಗ ಈ ರೀತಿ ಮಾಡಿದರೆ ಮಂತ್ರಿ ಸ್ಥಾನ ನೀಡುವುದು ತಪ್ಪುತ್ತದೆ ಎಂದು ಬೇರೆಯವರಿಂದ ಮಾಡಿಸುತ್ತಿರಬಹುದೇನೂ ನನ್ನಗೆ ಗೂತ್ತಿಲ್ಲ‌. ಇದರ ಹಿಂದೆ ಷಡ್ಯಂತ್ರ ಇದೇಯೇ ಎಂಬುದು ಗೂತ್ತಿಲ್ಲ ಎಂದರು.

ನನಗೆ ಕ್ಲೀನ್ ಚಿಟ್ ನೀಡಿದ ಮೇಲೆ ಸಮಾಧಾನವಾಯಿತು‌:ಮೊದಲು ನನ್ನ ಮೇಲೆ ಆಪಾದನೆ ಬಂದಾಗ ನನಗೆ ನೋವಾಯಿತು. ನಾನು ತಪ್ಪು ಮಾಡಿದ್ದರೆ, ತಾಯಿ ಚಾಮುಂಡೇಶ್ವರಿ ಶಿಕ್ಷೆ ನೀಡಲಿ ಎಂದು ಹೇಳಿದ್ದೆ. ತಾಯಿ ಚಾಮುಂಡೇಶ್ವರಿ ಜೊತೆ ನಾನು ನಂಬಿರುವ ದೇವತೆಗಳು, ಸ್ವಾಮಿಜೀಗಳು, ಸಂಘಟನೆ ಎಲ್ಲರೂ ನನಗೆ ಕ್ಲೀನ್ ಚಿಟ್ ನೀಡಿದ ಮೇಲೆ ಸಮಾಧಾನವಾಯಿತು‌. ನನಗೆ ಮಂತ್ರಿ ಸ್ಥಾನ ಯಾಕೆ ನೀಡಿಲ್ಲ ಎಂದು ರಾಜ್ಯದ ಜನತೆ, ಸ್ವಾಮಿಜೀಗಳು ಹಾಗೂ ಕಾರ್ಯಕರ್ತರು ಕೇಳುತ್ತಿದ್ದಾರೆ.

ಈ ಬಗ್ಗೆ ನಾನು ಸರ್ಕಾರದ ಗಮನಕ್ಕೆ ತಂದಿದ್ದೆನೆ. ಇದಕ್ಕಾಗಿ ಮೊದಲು ನಾನು ಸರ್ಕಾರದ ಗಮನಕ್ಕೆ ತಂದು ಅಧಿವೇಶಕ್ಕೆ ಹೋಗಲಿಲ್ಲ. ನಂತರ ಸಿಎಂ ಪೋನ್ ಮಾಡಿ ಕರೆದರು ನಂತರ ನಾನು ಅಧಿವೇಶಕ್ಕೆ ಹೋದೆ. ಈಗ ನನಗೆ ಮಂತ್ರಿ ಸ್ಥಾನ ನೀಡುವುದು ಸಿಎಂ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಕೆಎಸ್ ಈಶ್ವರಪ್ಪ ಹೇಳಿದರು.

ಸಂತೋಷ್​ ಪಾಟೀಲ್​ ಆತ್ಮಹತ್ಯೆ ಪ್ರಕರಣದ ಹಿನ್ನೆಲೆ:ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ವಾಟ್ಸ್​ಆ್ಯಪ್​​​ನಲ್ಲಿ ಡೆತ್ ನೋಟ್ ಕಳಿಸಿ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಬೆಳಗಾವಿ ತಾಲೂಕಿನ ಬಡಸ್ ಗ್ರಾಮದ ಸಂತೋಷ್​ ಪಾಟೀಲ್​ ವಿಜಯ ನಗರದಲ್ಲಿ ವಾಸವಾಗಿದ್ದರು‌. ಬಿಜೆಪಿ ಸದಸ್ಯರೂ ಆಗಿರುವ ಇವರು ಕೆಎಸ್. ಈಶ್ವರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿತ್ತು.

ಸಂತೋಷ ಅವರು ಹಿಂಡಲಗಾ ಗ್ರಾಮದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ 108 ಕಾಮಗಾರಿ ನೆರವೇರಿಸಿದ್ದರು. ಇದರ ಬಿಲ್ ಪಡೆಯಲು ಈಶ್ವರಪ್ಪ ಶೇ.40 ಕಮಿಷನ್ ಕೇಳುತ್ತಿರುವ ಬಗ್ಗೆ ಸಂತೋಷ ಆರೋಪ ಮಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಬಗ್ಗೆ ದೂರು ಸಲ್ಲಿಸಿದ್ದರು. ಬಳಿಕ ಈಶ್ವರಪ್ಪ ಅವರು ಸಂತೋಷ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಇದನ್ನೂ ಓದಿ:ಭ್ರಷ್ಟ ಅಧಿಕಾರಿಗಳ ವಿರುದ್ಧ ತ್ವರಿತ ಕಾನೂನು ಕ್ರಮ: ಲೋಕಾಯುಕ್ತ ಬಿ.ಎಸ್. ಪಾಟೀಲ ಎಚ್ಚರಿಕೆ

ABOUT THE AUTHOR

...view details