ಕರ್ನಾಟಕ

karnataka

By

Published : Sep 5, 2022, 5:13 PM IST

ETV Bharat / state

ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಚಾಮುಂಡೇಶ್ವರಿ ಮೇಲೆ ಸಿದ್ದರಾಮಯ್ಯ ಆಣೆ ಮಾಡಲಿ: ಈಶ್ವರಪ್ಪ ಸವಾಲು

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಈಶ್ವರಪ್ಪ ಸವಾಲೆಸೆದರು.

ಈಶ್ವರಪ್ಪ ಸವಾಲು
ಈಶ್ವರಪ್ಪ ಸವಾಲು

ಶಿವಮೊಗ್ಗ: ಸಿದ್ದರಾಮಯ್ಯ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಿದ್ರೆ, ಇದು ಜನೋತ್ಸವ ಅಲ್ಲ, ಭ್ರಷ್ಟಾಚಾರೋತ್ಸವ ಅಂತ ನಾನು ಒಪ್ಪಿಕೊಳ್ಳುತ್ತೆನೆ ಎಂದು ಸಿದ್ದರಾಮಯ್ಯನವರು ಬಿಜೆಪಿಯ ಜನೋತ್ಸವ ಕಾರ್ಯಕ್ರಮದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.‌

ಈಶ್ವರಪ್ಪ ಸವಾಲು

ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯ ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಕೇಂದ್ರದಲ್ಲೂ ಹಾಗೂ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಅನೇಕ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ.‌ ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬಿಜೆಪಿ ಪಕ್ಷದ ಮೇಲೆ ಆರೋಪಿ ಮಾಡುತ್ತಿದ್ದಾರೆ. ನಾನು ಕೆಂಪಣ್ಣಗೆ ನೇರವಾಗಿ ಹೇಳುತ್ತೇನೆ. ನೀವು ಹಿರಿಯರಿದ್ದೀರಾ, ನಿಮ್ಮ ಬಗ್ಗೆ ನನಗೆ ಗೌರವವಿದೆ.

ನೀವು ಏಕೆ ಕಾಂಗ್ರೆಸ್ ಕೈಗೊಂಬೆ ಆಗಿದ್ದೀರಿ ಎಂದು ಪ್ರಶ್ನಿಸಿದರು. ನಿಮ್ಮ ಬಳಿ ನೂರಾರು ದಾಖಲೆ ಇದೆ ಅಂತೀರಾ. ಆ ದಾಖಲೆಗಳನ್ನು ಬಿಡುಗಡೆ ಮಾಡಿ. ಒಂದು ರೆಕಾರ್ಡ್ ಬಿಡುಗಡೆ ಮಾಡದೇ, ನೀವು ಕಾಂಗ್ರೆಸ್ ಏಜೆಂಟ್ ರೀತಿ ಮಾತನಾಡಿದರೆ ನಿಮ್ಮನ್ನು ಜನ ಹೇಗೆ ನಂಬುತ್ತಾರೆ. ನೀವು ಪಿಎಂ ಹಾಗೂ ಸಿಎಂಗೆ ಪತ್ರ ಬರೆಯುತ್ತೀರಾ. ಪತ್ರ ಬರದ್ರೆ ಸಾಲದು, ಅದಕ್ಕೆ ತಕ್ಕಂತೆ ದಾಖಲೆ ನೀಡಬೇಕು ಎಂದರು.

ಕಾಂಗ್ರೆಸ್ ಭ್ರಷ್ಟಾಚಾರ ಬಗ್ಗೆಯು ತಿಳಿಸುತ್ತೇವೆ:ನಿನ್ನೆ ನಡೆದ ಕೋರ್ ಕಮಿಟಿಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಚಾರದ ಬಗ್ಗೆ ಜನರಿಗೆ ತಿಳಿಸಬೇಕೆಂದುಕೊಂಡಿದ್ದೇವೆ. ಅವರ ಅವಧಿಯ ಎಲ್ಲ ಭ್ರಷ್ಟಾಚಾರವನ್ನು ಹೊರಗೆ ತರುತ್ತೇವೆ. ಜೊತೆಗೆ ನಾವು ಏನ್ ಅಭಿವೃದ್ಧಿ ಮಾಡಿದ್ದೇವೆ ಎಂದು ತಿಳಿಸುತ್ತೇವೆ. ಕೆಂಪಣ್ಣನಂತಹ ಯಜಮಾನರನ್ನು ಬಿಟ್ಟು ಬಿಡಿ, ಅವರಿಗೆ ವಯಸ್ಸಾಗಿದೆ, ಅವರಿಗೆ ಕೆಟ್ಟ ಹೆಸರು ತರಬೇಡಿ ಎಂದು ಸಿದ್ದರಾಮಯ್ಯಗೆ ತಿಳಿಸಿದರು. ಕೆಂಪಣ್ಣರನ್ನು ಮುಂದೆ ಬಿಟ್ಟು ಹಿಂದೆ ನೀವು ಮಾತನಾಡುತ್ತೀರಿ, ನಿಮ್ಮ ಮಾತನ್ನು ಯಾರು ನಂಬುತ್ತಾರೆ. ಒಂದು ದಾಖಲೆಯನ್ನು ಬಿಡುಗಡೆ ಮಾಡಲ್ಲ, ನಿಮ್ಮದು ಕೇವಲ ಪುಕ್ಸಟ್ಟೆ ಮಾತು ಎಂದು ತಿಳಿಸಿದರು.

ಜನೋತ್ಸವದಲ್ಲಿ ನಮ್ಮ ಅಭಿವೃದ್ಧಿ ತಿಳಿಸುತ್ತೇವೆ:ಜನೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಅವಧಿಯಲ್ಲಿ ಆದ ಅಭಿವೃದ್ಧಿಯ ಬಗ್ಗೆ ಜನತೆಗೆ ತಿಳಿಸುತ್ತೇವೆ. ಕಾಂಗ್ರೆಸ್‌ ಮಾತನ್ನು ಯಾರು ನಂಬಲ್ಲ. ಆದರೂ ನೀವು ಭಂಡತನದಿಂದ ಆರೋಪ ಮಾಡುತ್ತಿದ್ದೀರಿ.‌ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಯಾರು ನಂಬುವುದಿಲ್ಲ.‌ ಶಿವಕುಮಾರ್ ಇದು ಶೇ.40 ಸರ್ಕಾರ ಅಂತಾರೆ. ಹಾಗಿದ್ದರೆ ನೀವು ಯಾಕೆ ತಿಹಾರ್ ಜೈಲಿಗೆ ಹೋಗಿದ್ರಿ? ನಿಮ್ಮನ್ನು ಪುಕ್ಸಟ್ಟೆ ತಿಹಾರ್ ಜೈಲಿಗೆ ಕಳುಹಿಸಿದ್ರಾ?. ನೀವು ಈಗ ಸತ್ಯಹರಿಶ್ಚಂದ್ರನ ರೀತಿ ಮಾತನಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸಿಎಂ ಸ್ಥಾನ, ಶಾಸಕ ಸ್ಥಾನ ಹೋಗಿದ್ರು, ಈಗ ಮತ್ತೆ ಸಿಎಂ ಆಗಲು ಎಲ್ಲ ರೀತಿಯ ಆಟಗಳನ್ನು ಆಡುತ್ತಿದ್ದಾರೆ. ದೇಶದಲ್ಲಿಯೇ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಅನೇಕ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಬರ್ತಾ ಇದ್ದಾರೆ ಎಂದರು.

(ಇದನ್ನೂ ಓದಿ: ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಹಗರಣ ನಡೆದಿಲ್ಲ: ಸಚಿವ ಮಾಧುಸ್ವಾಮಿ ಸ್ಪಷ್ಟನೆ)

ABOUT THE AUTHOR

...view details