ಶಿವಮೊಗ್ಗ:ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಪತ್ನಿ ಜಯಲಕ್ಷ್ಮಿ ಜೊತೆ ಆಗಮಿಸಿ ಶಿವಮೊಗ್ಗ ಜಿಲ್ಲಾ ಆಯುರ್ವೇದ ಬೋಧನಾಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದುಕೊಂಡರು.
ಕೋವಿಡ್ ರೋಗ ಪ್ರಪಂಚದ ಜನರನ್ನು ಬಾಧಿಸಿತ್ತು. ಲಸಿಕೆ ಕಂಡು ಹಿಡಿದ ಭಾರತೀಯ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಲಸಿಕೆ ಪಡೆದೆ, ಯಾವುದೇ ನೋವಾಗಲಿಲ್ಲ ಎಂದು ಸಚಿವರು ಹೇಳಿದರು.
ನಿನ್ನೆಯಿಂದ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಪಡೆದರೆ ಏನಾದರೂ ಸಮಸ್ಯೆ ಆಗುತ್ತದೆ ಎಂಬ ಭಾವನೆ ಬಹಳ ಜನರಲ್ಲಿತ್ತು. ಆದರೆ, ನಾನು ಇಲ್ಲಿಗೆ ಬಂದು ಲಸಿಕೆ ಪಡೆದುಕೊಂಡೆ. ನನಗೆ ಲಸಿಕೆ ಹಾಕಿದ ಅನುಭವವೇ ಆಗಲಿಲ್ಲ. ಸ್ವಲ್ಪವೂ ನೋವಾಗಲಿಲ್ಲ ಎಂದರು.
ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದ ಪರಿಷತ್ ಉಪ ಸಭಾಪತಿ ಎಂ.ಕೆ ಪ್ರಾಣೇಶ್ ದಂಪತಿ