ಶಿವಮೊಗ್ಗ: ಬೆರಳಚ್ಚು ಹಾಜರಾತಿ ಕೈ ಬಿಡುವಂತೆ ನೌಕರರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಜೋಗದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್)ನಲ್ಲಿ ನಡೆದಿದೆ.
ಕೆಪಿಸಿಎಲ್ ನೌಕರರ ಪ್ರತಿಭಟನೆ ಕೋವಿಡ್ ಹಿನ್ನೆಲೆಯಲ್ಲಿ ಬೆರಳಚ್ಚು ಹಾಜರಾತಿ ಕೈ ಬಿಡುವಂತೆ ನೌಕರರ ಸಂಘದ ವತಿಯಿಂದ ಹಿಂದೆಯೇ ಮನವಿ ಮಾಡಲಾಗಿತ್ತು. ಆದರೂ ಕೂಡಾ ಕೆಪಿಸಿಎಲ್ ಅಧಿಕಾರಿಗಳು ಗಮನ ಹರಿಸದೆ ಹಾಗೆಯೇ ಬಿಟ್ಟಿದ್ದರು.
ಇದನ್ನೂ ಓದಿ:ಕಾರ್ಮಿಕರ ಠೇವಣಿ ಆಧರಿತ ವಿಮೆ ಗರಿಷ್ಠ 7 ಲಕ್ಷಕ್ಕೆ ಏರಿಕೆ: ಇಪಿಎಫ್ಓ ಹೊಸ ನೀತಿಯ ಪೂರ್ಣ ಮಾಹಿತಿ
ಈಗ ಕೋವಿಡ್ ಪ್ರಕರಣಗಳು ಹೆಚ್ವಾಗುತ್ತಲಿದ್ದು, ಬೆರಳಚ್ಚು ಹಾಜರಾತಿಯಿಂದ ಕೋವಿಡ್ ಬೇಗ ಹರಡುವ ಸಾಧ್ಯತೆ ಇದೆ. ಇದರಿಂದ ಕೋವಿಡ್ ಮುಗಿಯುವ ತನಕ ಬೆರಳಚ್ಚು ಹಾಜರಾತಿಗೆ ವಿನಾಯಿತಿ ನೀಡಬೇಕೆಂದು ನೌಕರರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಕೆಪಿಸಿಎಲ್ ಅಧಿಕಾರಿಗಳು ಭೇಟಿ ನೀಡಿ ನೌಕರರ ಮನವೊಲಿಸುವ ಕಾರ್ಯ ಮಾಡಿದರು. ಆದರೂ ಕೆಲ ಕಾಲ ನೌಕರರು ತಮ್ಮ ಪಟ್ಟು ಬಿಡದೇ ಪ್ರತಿಭಟನೆ ಮುಂದುವರೆಸಿದರು.