ಕರ್ನಾಟಕ

karnataka

ETV Bharat / state

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಲೆ ಕೆಲಸ ಮಾಡಿಲ್ಲ: ಮಧು ಬಂಗಾರಪ್ಪ

ಗುಜರಾತ್ ಚುನಾವಣೆಯಲ್ಲಿ ಜನರ ತೀರ್ಪಿಗೆ ನಾವೆಲ್ಲ ತಲೆಬಾಗಬೇಕು. ಅದೇ ರೀತಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಲೆ ಕೆಲಸ ಮಾಡಿಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ‌ಮಧು ಬಂಗಾರಪ್ಪ ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ‌ಮಧು ಬಂಗಾರಪ್ಪ
ಕೆಪಿಸಿಸಿ ಉಪಾಧ್ಯಕ್ಷ ‌ಮಧು ಬಂಗಾರಪ್ಪ

By

Published : Dec 8, 2022, 7:31 PM IST

ಶಿವಮೊಗ್ಗ: ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕದಲ್ಲಿ‌ ಪ್ರಭಾವ ಬೀರಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ‌ಮಧು ಬಂಗಾರಪ್ಪ ತಿಳಿಸಿದ್ದಾರೆ. ಜಿಲ್ಲಾ‌ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಗುಜರಾತ್ ಚುನಾವಣೆಯಲ್ಲಿ ಜನರ ತೀರ್ಪಿಗೆ ನಾವು ತಲೆಬಾಗಬೇಕು. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಲೆ ಕೆಲಸ ಮಾಡಿಲ್ಲ ಎಂದರು.

ಸರ್ಕಾರ ರೈತರಿಗೆ ಅನ್ಯಾಯ‌ ಮಾಡ್ತಿದೆ: ದೇಶವನ್ನು ಜಾತಿ, ಭಾಷೆ ಮೂಲಕ ಒಡೆಯುವ ಕೆಲಸ ಮಾಡಲಾಗುತ್ತಿದೆ. ಈಗ ಧರ್ಮವನ್ನು ಬಿಟ್ಟು ರೈತರ ಬಳಿ ಬಂದಿದ್ದಾರೆ. ಬಿಜೆಪಿ ಶಾಸಕರು ಹೆಚ್ಚಾಗಿರುವ ಜಿಲ್ಲೆಗಳಾದ ಕರಾವಳಿ ಭಾಗಕ್ಕಿಂತ ಇತರೆ ಜಿಲ್ಲೆಯಲ್ಲಿ ಭತ್ತದ ಬೆಂಬಲ ಬೆಲೆಯನ್ನು 500 ರೂ.ಗೆ ಹೆಚ್ಚಿಸಲಾಗಿದೆ. ಕರಾವಳಿ ಭಾಗಕ್ಕೆ ಹೆಚ್ಚು ಅನುದಾನ ನೀಡಲು 100 ಕೋಟಿ ರೂ ತೆಗೆದಿಡಲಾಗಿದೆ. ಉಳಿದ ಜಿಲ್ಲೆಯ ರೈತರು ಕಷ್ಟ ಪಡುವುದಿಲ್ಲವೇ? ಎಂದು ಪ್ರಶ್ನಿಸಿದರು. ಇದು ರಾಜ್ಯದ ಇತರೆ ಜಿಲ್ಲೆಯ ರೈತರಿಗೆ ಮಾಡಿದ ಅನ್ಯಾಯ ಎಂದು ದೂರಿದರು.

ಕೆಪಿಸಿಸಿ ಉಪಾಧ್ಯಕ್ಷ ‌ಮಧು ಬಂಗಾರಪ್ಪ ಅವರು ಮಾತನಾಡಿದರು

ಸರ್ಕಾರದ ಖರೀದಿ ಮಿತಿ ಮುಗಿದ‌ ನಂತರ ಭತ್ತದ ಖರೀದಿ ನಿಲ್ಲಿಸಿ, ನಂತರ ತಮಗೆ ಬೇಕಾದ ದರದಲ್ಲಿ ಖರೀದಿ ಮಾಡುತ್ತಾರೆ. ಇದರಿಂದ ರೈತ ನಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯದ ಎಲ್ಲಾ ಭಾಗದ ರೈತರಿಗೆ ನ್ಯಾಯ ಒದಗಿಸುವಂತೆ ಯಡಿಯೂರಪ್ಪನವರಿಗೆ ಮನವಿ ಮಾಡುತ್ತೇವೆ. ಅವರು ಇಲ್ಲಿನ ರೈತರಿಗೂ ಹೆಚ್ಚಿನ ದರ ಒದಗಿಸಲಿ. ‌ರೈತರ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡ್ತಿದೆ. ಅಲ್ಲದೇ ಬೆಂಬಲ‌ ಬೆಲೆಯನ್ನು 500 ರೂ‌ನಿಂದ 1 ಸಾವಿರಕ್ಕೆ ಏರಿಕೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತದೆ ಎಂದರು.

ಪಕ್ಷದ ಆದೇಶ ಪಾಲಿಸಬೇಕು: ಅರ್ಜಿ ಸಲ್ಲಿಸಿದವರು ತಮಗೆ ಟಿಕೆಟ್ ಖಚಿತ​ ಎಂದು ಭಾವಿಸದೆ ಪಕ್ಷದ ಆದೇಶವನ್ನು ಪಾಲಿಸಬೇಕು. ಪಕ್ಷ ಶಿಸ್ತು‌ಕ್ರಮ ತೆಗೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಎಂದರು. ಬಿಜೆಪಿಯವರಿಗೆ ಚುನಾವಣೆ ಬಂದಾಗ ದಂಡಾವತಿ ನೆನಪಾಗುತ್ತದೆ. ನಾವು ಹೇಳಿದ್ದು ಡ್ಯಾಂ ಬೇಡ ಬ್ಯಾರೇಜ್ ಎಂದು. ಈಗ ಶಾಸಕರು ಅದನ್ನೇ ಮಾಡ್ತಾ ಇದ್ದಾರೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್, ಮಾಜಿ ಎಂಎಲ್​ಸಿ ಆರ್.ಪ್ರಸನ್ನ ಕುಮಾರ್, ಎಸ್. ಪಿ ದಿನೇಶ್, ಜೆ. ಡಿ ಮಂಜುನಾಥ್ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ:ಗುಜರಾತ್​​ ಫಲಿತಾಂಶ ದೊಡ್ಡ ಸ್ಫೂರ್ತಿ, ರಾಜ್ಯದಲ್ಲೂ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಬಿಜೆಪಿಗೇ ಅಧಿಕಾರ: ಬಿಎಸ್‌ವೈ

ABOUT THE AUTHOR

...view details