ಶಿವಮೊಗ್ಗ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆದಿತ್ಯ ರಾವ್ನನ್ನು ಬಿಜೆಪಿ ನಾಯಕರು ಮಾನಸಿಕ ಅಸ್ವಸ್ಥ ಎಂದು ಹೇಳುವ ಮೂಲಕ ಆರೋಪಿಯನ್ನ ರಕ್ಷಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೆಂದ್ರಪ್ಪ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದಿತ್ಯರಾವ್ ವಿಷಯದಲ್ಲಿ ಬಿಜೆಪಿಯದ್ದು ದ್ವಂದ್ವ ನಿಲುವು: ಕಾಂಗ್ರೆಸ್ ನಾಯಕನ ಆಕ್ರೋಶ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ, ನಿರುದ್ಯೋಗಿ ಎಂದು ಗೃಹ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದಿತ್ಯ ರಾವ್ನನ್ನು ವೈದ್ಯರು ಪರೀಕ್ಷೆ ನಡೆಸಿ ವರದಿ ನೀಡಬೇಕು. ಆದರೆ, ಬಿಜೆಪಿ ನಾಯಕರುಗಳೇ ವೈದ್ಯರ ವರದಿಗಿಂತ ಮುಂಚಿತವಾಗಿ ಆತ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೆಂದ್ರಪ್ಪ ವ್ಯಂಗ್ಯವಾಗಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಬಾಂಬ್ ಇಟ್ಟ ಆದಿತ್ಯ ರಾವ್ ಆರ್ಎಸ್ಎಸ್ ಕಾರ್ಯಕರ್ತನಾಗಿದ್ದು, ಈತನನ್ನು ರಕ್ಷಿಸಲು ಆರ್ಎಸ್ಎಸ್ ಪ್ರಮುಖರು ಹಾಗೂ ಬಿಜೆಪಿಯ ಗೃಹ ಸಚಿವರು ,ಉಪ ಮುಖ್ಯಮಂತ್ರಿಗಳು, ಅವನ ಪರ ಮಾತನಾಡುತ್ತಿದ್ದಾರೆ. ಆದಿತ್ಯ ರಾವ್ ಮಾನಸಿಕ ಅಸ್ವಸ್ಥ, ನಿರುದ್ಯೋಗಿ ಎಂದು ಹೇಳುತ್ತಿದ್ದಾರೆ. ಆದಿತ್ಯ ರಾವ್ನನ್ನು ವೈದ್ಯರು ಪರೀಕ್ಷೆ ನಡೆಸಿ ವರದಿ ನೀಡಬೇಕು. ಆದರೆ, ಬಿಜೆಪಿ ನಾಯಕರುಗಳೇ ವೈದ್ಯರ ವರದಿಕ್ಕಿಂತ ಮುಂಚೆಯೇ ಆತ ಮಾನಸಿಕ ಅಸ್ವಸ್ಥ ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿದ್ರೆ, ಬಿಜೆಪಿ ನಾಯಕರು ಯಾವಾಗ ನ್ಯೂರೋ ಸರ್ಜನ್ಗಳಾದರು. ಇವರು ಯಾವಾಗ ಡಾಕ್ಟರ್ಗಳಾದ್ರು ಗೊತ್ತಾಗಲಿಲ್ಲ ಎಂದು ಗೃಹ ಸಚಿವರು, ಸಚಿವರ ವಿರುದ್ದ ವ್ಯಂಗ್ಯವಾಗಿ ಚುಚ್ಚಿದರು.
ಬಾಂಬ್ ಇಟ್ಟವನು ಒಬ್ಬ ಹಿಂದೂ ಆಗಿರದೇ ಮುಸ್ಲಿಂ ಸಮಾಜದವರು ಯಾರಾದರೂ ಇಟ್ಟಿದ್ದರೆ, ಬಿಜೆಪಿ ನಾಯಕರು ಸಮ್ಮನೆ ಇರುತ್ತಿರಲಿಲ್ಲ. ಬಿಜೆಪಿಯವರು ಸಿಎಎ ಹೆಸರಿನಲ್ಲಿ ಮುಸ್ಲಿಮರನ್ನ ದೇಶದಿಂದ ಹೊರ ಹಾಕುವ ಯತ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಇನ್ನೂ ಕಲ್ಲಡ್ಕ ಪ್ರಭಾಕರ್ರವರು ಮಂಗಳೂರು ಗೋಲಿಬಾರ್ನಲ್ಲಿ ಇಬ್ಬರು ಮೃತರಾಗಿದಕ್ಕೆ ಸಮಾಜ ಶಾಂತಿಯುತವಾಗಿದೆ ಎಂದು ಹೇಳಿಕೆ ನೀಡುತ್ತಾರೆ. ಇನ್ನು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮ ಕ್ಷೇತ್ರದಲ್ಲಿ ಮುಸ್ಲಿಂರನ್ನು ಹೊರ ಹಾಕುತ್ತೇನೆ ಎಂದು ಮಾತನಾಡುತ್ತಾರೆ. ಇದು ಬಿಜೆಪಿಯವರ ನೀತಿ ಎಂದು ಕಿಡಿಕಾರಿದರು.